ಕನ್ನಡದ ಮೇಲೆ ಹಿಡಿತವಿಲ್ಲದ ಕಾರಣ, ಜನರನ್ನು ರಂಜಿಸಲು kiran Yogeshwar ಅವರಿಗೆ ಸಾಧ್ಯವಾಗಿರಲಿಲ್ಲ
Bigg Boss Kannada OTT ಪ್ರಸಾರ ಪ್ರಾರಂಭಿಸಿ ಒಂದು ವಾರವಾಗಿದೆ. ಸಂಪ್ರದಾಯದಂತೆ ವಾರದ ಕತೆಗಾಗಿ ಕಿಚ್ಚ ಬಂದಿದ್ದಾರೆ. ಜೊತೆಗೆ ಒಬ್ಬ ಸ್ಪರ್ಧಿಯನ್ನು ಮನೆಗೆ ಹೊರಗೆ ಕರೆಸಿಕೊಳ್ಳಲಾಗಿದೆ. ( kiran Yogeshwar)
![kiran yogeshwar2](https://torrentspree.com/wp-content/uploads/2022/08/kiran-yogeshwar2.jpg)
ನಿರೀಕ್ಷೆಯಂತೆ ಮೊದಲ ಬಾರಿ ಕಿರಣ್ ಯೋಗೇಶ್ವರ್ ಹೊರ ಬಂದಿದ್ದಾರೆ. ಜನರನ್ನು ರಂಜಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದ ಅವರು, ಮನೆಯ ಒಳಗಡೆ ಕೂಡಾ ಅಷ್ಟೇನೂ ಸಕ್ರಿಯವಾಗಿರಲಿಲ್ಲ. ಕ್ಯಾಮಾರ ಮುಂದೆ ಕಾಣಿಸಿಕೊಂಡ್ರೆ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಬದುಕು. ಹೀಗಾಗಿಯೇ ಕಿರಣ್ ಮನೆಯಿಂದ ಹೊರಗೆ ಬಂದಿದ್ದಾರೆ.
ಇನ್ನು ಸೋನು ಗೌಡ ಮನೆಯಿಂದ ಹೊರಗೆ ಹೋಗ್ತಾರೆ ಅನ್ನಲಾಗಿತ್ತು. ಆದರೆ ವಿಡಿಯೋ ಹಾಗೂ ಅಡಿಗನ ಜೊತೆಗೆ ಪ್ರೇಮದಾಟದ ಕಾರಣಕ್ಕೆ ಅವರು ಮನೆಯಲ್ಲೇ ಉಳಿದಿದ್ದಾರೆ.
ಇದನ್ನು ಓದಿ : Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್
![kiran yogeshwar1](https://torrentspree.com/wp-content/uploads/2022/08/kiran-yogeshwar1.jpg)
ರಾಜಸ್ಥಾನ ಮೂಲದ ಕಿರಣ್ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಶಂಭೋ ಶಿವ ಶಂಕರ ಅನ್ನುವ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಭಾಷೆಯ ಮೇಲಿನ ಹಿಡಿತವಿಲ್ಲದಿರುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು.
Discussion about this post