ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಜೊತೆಗೆ ಪ್ರೀತಿಯಲ್ಲಿದ್ರ ಸ್ವಾಮೀಜಿ ( Shivamahnta Swamiji )
ರಾಮನಗರ : ಜಿಲ್ಲೆಯ ಮಾಗಡಿ ತಾಲೂಕು ಸೋಲೂರು ಗದ್ದುಗೆ ಮಠದ ಶಿವ ಮಹಾಂತೇಶ ಸ್ವಾಮೀಜಿ ಪರಾರಿ ಪ್ರಕರಣ ಇನ್ನೂ ಪೊಲೀಸರ ತನಿಖೆ ಹಂತದಲ್ಲಿದೆ. ಸ್ವಾಮೀಜಿ ಎಲ್ಲಿದ್ದಾರೆ ಅನ್ನುವ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ಕೆಲ ಮೂಲಗಳ ಪ್ರಕಾರ ಸ್ವಾಮೀಜಿಯ ಮನವೊಲಿಕೆ ಕಾರ್ಯ ನಡೆಯುತ್ತಿದೆ ಅನ್ನಲಾಗಿದೆ.( ( Shivamahnta Swamiji ))
ರೈತ ಕುಟುಂಬದಿಂದ ಬಂದ ಹರೀಶ್ ನಂತ್ರ ಚನ್ನವೀರ ಶಿವಾ ಮಹಂತ ಸ್ವಾಮೀಜಿಯಾಗಿದ್ದರು. ಓದಿನಲ್ಲಿ ಮುಂದಿದ್ದ ಸ್ವಾಮೀಜಿಗಳು ಬದುಕಿನಲ್ಲಿ ಸಾಧನೆಯ ಕನಸು ಕಂಡಿದ್ದರು ಕೂಡಾ. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ವಿದ್ಯಾಭ್ಯಾಸ ಮಾಡುವಾಗ್ಲೇ ಸ್ವಾಮೀಜಿಗೆ ಹುಡುಗಿಯೊಬ್ಬಳ ಸ್ನೇಹವಾಗಿತ್ತು, ಸ್ನೇಹ ಪ್ರೀತಿಗೆ ತಿರುಗಿತ್ತು ಅನ್ನಲಾಗಿದೆ.
ಇದನ್ನು ಓದಿ : Sarvakar photo controversy : ಸಾರ್ವಕರ್ ಫೋಟೋ ವಿವಾದ : ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ದಾಂಧಲೆ
ಸ್ವಾಮೀಜಿ ವಿದ್ಯಾಭ್ಯಾಸ ಮುಂದುವರಿಸಿದ್ರೆ ಯುವತಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರಂತೆ. ಎರಡು ವರ್ಷಗಳ ಹಿಂದೆ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕವಾದ ಬಳಿಕವೂ ಹೊಣೆಗಾರಿಕೆ ಮರೆತ ಸ್ವಾಮೀಜಿ ಪ್ರೀತಿಗೆ ಮಾರು ಹೋಗಿದ್ದರಂತೆ. ಎರಡು ತಿಂಗಳ ಹಿಂದೆ ಯುವತಿಗೆ ತಂದೆ ತಾ ನೋಡಿದ ಮಾಗಡಿಯ ಹುಡುಗನೊಂದಿಗೆ ವಿವಾಹವಾಗಿತ್ತು. ಆದರೆ ಸುಂದರ ಸಂಸಾರಕ್ಕೆ ಎಂಟ್ರಿ ಕೊಟ್ಟ ಸ್ವಾಮೀಜಿ ಸಂಸಾರ ಹಾಳು ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಕಳೆದ ಮಂಗಳವಾರವೇ ಸ್ವಾಮೀಜಿ ಮತ್ತು ಮಹಿಳೆ ಪರಾರಿಯಾಗಿದ್ದಾರೆ ಅನ್ನುವ ಮಾಹಿತಿಗಳು ಕೂಡಾ ಲಭಿಸಿದೆ. ಆದರೆ ಸ್ವಾಮೀಜಿಯ ಲವ್ ಸ್ಟೋರಿ ಕುರಿತಂತೆ ಇರುವುದೆಲ್ಲವೂ ಅಂತೆ ಕಂತೆ ಸುದ್ದಿಗಳು. ಪೊಲೀಸರ ತನಿಖೆಯ ಬಳಿಕವೇ ಸತ್ಯ ಹೊರಬರಬೇಕಾಗಿದೆ.
Discussion about this post