ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಇಲ್ಲದ ಧರ್ಮ ದಂಗಲ್, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ನಡೆಯುತ್ತಿರುವುದು ದುರಾದೃಷ್ಟಕರ ( Sarvakar photo controversy)
ಭಾರತ ಸ್ವಾತಂತ್ರ್ಯ ಪಡೆಯಬೇಕು ಅನ್ನುವ ನಿಟ್ಟಿನಲ್ಲಿ ಜಾತಿ ಧರ್ಮ ಮರೆತು ಒಗ್ಗಟ್ಟಾಗಿ ನಾವು ಭಾರತೀಯುರು ಎಂದು ಮಹಾನ್ ಚೇತನಗಳು ಹೋರಾಟ ನಡೆಸಿವೆ.ಆದರೆ ಈಗ ಅದೇ ಮಹಾನ್ ಚೇತನಗಳ ಜಾತಿ, ಧರ್ಮ ಹಿಡಿದು ಕಿತ್ತಾಟ ಪ್ರಾರಂಭವಾಗಿದೆ. ಆ ಹೋರಾಟಗಾರ ನಮ್ಮ ಜಾತಿ, ಈ ಹೋರಾಟಗಾರ ನಮ್ಮ ಜಾತಿ ಎಂದು ಕಿತ್ತಾಟ ಪ್ರಾರಂಭವಾಗಿದೆ. ಅವತ್ತು ಅವರು ಒಗ್ಗಟ್ಟಿನಿಂದ ಇದ್ದ ಕಾರಣಕ್ಕೆ ನಾವು ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆಯಾದೆವು ಅನ್ನುವುದನ್ನು ನಾವು ಮರೆತು ಬಿಟ್ಟಿದ್ದೇವೆ.( Sarvakar photo controversy)
ಇದನ್ನು ಓದಿ : Ashwath narayan: ಅಶ್ವಥ್ ನಾರಾಯಣ್ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆದ ಕುಮಾರಸ್ವಾಮಿ
ಈ ನಡುವೆ ಮನೆಮನೆಗೂ ತಿರಂಗಾ ಅಭಿಯಾನದ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಸಿಟಿ ಸೆಂಟ್ರಲ್ ಮಾಲ್ ಅನ್ನು ಅಮೃತ ಮಹೋತ್ಸವಕ್ಕೆ ಪೂರಕವಾಗಿ ಶೃಂಗರಿಸಲಾಗಿತ್ತು. ಮಹಾತ್ಮ ಗಾಂಧಿ, ನೆಹರು, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ಚಂದ್ರಶೇಖರ್ ಆಜಾದ್, ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ವೀರ ಸಾರ್ವಕರ್ ಫೋಟೋ ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.
ಈ ವೇಳೆ ಮಾಲ್ ಗೆ ಬಂದ ಕಿಡಿಗೇಡಿಗಳ ಗುಂಪು ಸ್ವಾತಂತ್ರ್ಯ ಹೋರಾಟಗಾರರ ನಡುವೆ ವೀರ ಸಾರ್ವಕರ್ ಫೋಟೋ ಯಾಕೆ ಹಾಕಿದ್ದೀರಾ ಮೊದಲು ಅದನ್ನು ತೆಗೆಯಿರಿ ಎಂದು ಮಾಲ್ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ್ಯ ಹೋರಾಟಗಾರನಾದ ಅಂದಿದ್ದಾರೆ.
ಮೌಲಾನಾ ಅಬ್ದುಲ್ ಕಲಾಂ ಅಜಾದ್ರ ಫೋಟೋವನ್ನು ಹಾಕೋದಾಗಿ ಮಾಲ್ ಸಿಬ್ಬಂದಿ ಹೇಳಿದ ಬಳಿಕ ಕಿಡಿಗೇಡಿಗಳು ತೆರಳಿದ್ದಾರೆ.
ಈ ವಿಷಯ ತಿಳಿಯುತ್ತಲೇ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಕಿಡಿಗೇಡಿಗಳು ರೌಡಿಗಳಂತೆ ಬಂದು ಮಾಲ್ ಮಂದಿಯನ್ನು ಬೆದರಿಸಿದ್ದಾರೆ. ಸಾರ್ವಕರ್ ಫೋಟೋ ತೆಗೆಯಲು ಹೇಳಿದವರ ಮೇಲೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮಾಲ್ ಮುಂಭಾಗದಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ರು.
ಈ ವೇಳೆ ಸ್ಥಳಕ್ಕೆ ಬಂದ ಮೇಯರ್ ಹಾಗೂ ಉಪಮೇಯರ್ ಸಾರ್ವಕರ್ ಫೋಟೋ ತೆಗೆಯುವಂತೆ ಒತ್ತಾಯಿಸಿದವರ ಮೇಲೆ ಕೇಸ್ ದಾಖಲಾಗಿದೆ. ಕಾನೂನು ಪ್ರಕಾರ ಅವರ ಮೇಲೆ ಕ್ರಮವಾಗಲಿದೆ ಎಂದು ಭರವಸೆ ನೀಡಿದರು. ಹೀಗೆ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.
Discussion about this post