ಮುಂಬೈ : ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಮಹಾ ಟ್ವಿಸ್ಟ್ ಸಿಕ್ಕಿದೆ. ನಿರೀಕ್ಷೆಯಂತೆ ಬಿಜೆಪಿ ತಾನು ಮಾಡಬೇಕಾದ ಕೆಲಸವನ್ನು ಸದ್ದಿಲ್ಲದೆ ಮುಗಿಸಿದೆ. ಶಿಂಧೆಗೆ ಪಟ್ಟಬೇಕು ಅನ್ನುವ ತನ್ನ ತೀರ್ಮಾನವನ್ನು ಗುಪ್ತವಾಗಿ ಜಾರಿಗೊಳಿಸಿರುವ ಬಿಜೆಪಿ, ಈ ಮೂಲಕ ಬಾಳಾ ಠಾಕ್ರೆ ಅಭಿಮಾನಿಗಳನ್ನು ಶಾಂತಗೊಳಿಸಲು ಮುಂದಾಗಿದೆ.
ಇದನ್ನೂ ಓದಿ : ಶಿರಡಿಯಲ್ಲಿ ಶರ್ಮಿಳಾ ಮಾಂಡ್ರೆ : ಗುರುವಾರ ಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ
ಈ ನಡುವೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದವಾಗಿರುವ ಏಕನಾಥ್ ಶಿಂಧೆ, ನಾನು ಅಧಿಕಾರಕ್ಕಾಗಿ ಬಂಡಾಯವೇಳಲಿಲ್ಲ. ಬಾಳಾ ಸಾಹೇಬ್ ಠಾಕ್ರೆ ಅವರ ತತ್ವ ಸಿದ್ದಾಂತ ಉಳಿಸಲು ಬಂಡಾಯವೇಳಬೇಕಾಯ್ತು ಅಂದಿದ್ದಾರೆ. ಮುಂಬೈ ನಲ್ಲಿ ಫಡ್ನವೀಸ್ ಜೊತೆಗೆ ಜಂಟಿ ಪತ್ರಿಕಾಗೋಷ್ಟಿ ನಡೆಸಿದ ಅವರು, ಶಿವಸೇನೆ ಮತ್ತು ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರ ಮಿತಿ ಮೀರಿತ್ತು. ಸಂಪುಟ ಸಚಿವರೇ ಭ್ರಷ್ಟಾಚಾರ ನಡೆಯುತ್ತಿತ್ತು.
ಇದನ್ನೂ ಓದಿ : ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ : ಉದ್ಧವ್ ಠಾಕ್ರೆಗೆ ಶಾಕ್ ಕೊಟ್ಟ ಬಿಜೆಪಿ
ಇದರಿಂದ ಬೇಸತ್ತ ನಾವು ಬಂಡಾಯವೇಳಬೇಕಾಯ್ತು. ಈ ಮೂಲಕ ಉದ್ಧವ್ ಠಾಕ್ರೆಯವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಬಾಳಾ ಸಾಹೇಬ್ ಠಾಕ್ರೆಯವರ ಹಿಂದುತ್ವ ಮತ್ತು ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿದೆ ಎಂದು ಶಿಂಧೆ ಭರವಸೆ ಕೊಟ್ಟಿದ್ದಾರೆ.
Discussion about this post