ದೂರದೃಷ್ಟಿಯನ್ನು ಇಟ್ಟುಕೊಂಡಿರುವ ಬಿಜೆಪಿ ಶಿವಸೇನೆಯನ್ನು ಠಾಕ್ರೆ ಮನೆಯ ಹಿಡಿತದಿಂದ ತಪ್ಪಿಸಲು ತಂತ್ರ ರೂಪಿಸಿದೆ
ಮುಂಬೈ : ಆಘಾಡಿ ಸರ್ಕಾರ ಉರುಳಿದ ಬಳಿಕ ಬಿಜೆಪಿ ದೇವೇಂದ್ರ ಫಢ್ನವೀಸ್ ಸಿಎಂ ಆಗಲಿದ್ದಾರೆ. ಏಕನಾಥ್ ಶಿಂಧೆ ಉಪಮುಖ್ಯಯಾಗಲಿದ್ದಾರೆ ಎಂದು ಬಿಜೆಪಿ ಕಡೆಯಿಂದ ಸುದ್ದಿ ಹರಿಬಿಡಲಾಗಿತ್ತು. ಹೀಗಾಗಿ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಯಾಗ್ತಾರೆ ಎಂದೇ ನಂಬಲಾಗಿತ್ತು. ಆದರೆ ಸರ್ಕಾರ ಉರುಳಿಸಿದ ಕಳಂಕ ತಪ್ಪಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಶಿಂಧೆಯವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಬುದ್ದಿವಂತಿಕೆ ತೋರಿದೆ. ಜೊತೆಗೆ ಒಂದು ಕಲ್ಲಿನಲ್ಲಿ ಹಲವು ಹಣ್ಣು ಉದುರಿಸಲು ಬಿಜೆಪಿ ಮುಂದಾಗಿದೆ.
ಇಂದು ರಾತ್ರಿ 7.30ಕ್ಕೆ ಏಕನಾಥ್ ಶಿಂಧೆ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಶಿವಸೇನಾ ಶಿಂಧೆ ಬಣದ ಸರ್ಕಾರ ಆಡಳಿತ ಚುಕ್ಕಾಣಿ ಕೈಗೆತ್ತಿಕೊಳ್ಳಲಿದೆ.
ಇನ್ನು ಬಿಜೆಪಿ ನಾಯಕ ಫಡ್ನವೀಸ್ ಶಿಂಧೆ ಸರ್ಕಾರದಿಂದ ದೂರವಿರಲು ನಿರ್ಧರಿಸಿದ್ದು, ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ ಬಿಜೆಪಿ ಶಿಂಧೆಯವರನ್ನು ಮುಖ್ಯಮಂತ್ರಿ ಮಾಡಿದ್ಯಾಕೆ.
ಒಂದು ವೇಳೆ ಬಿಜೆಪಿಯವರೇ ಮುಖ್ಯಮಂತ್ರಿಯಾದರೆ ಆಘಾಡಿ ಸರ್ಕಾರವನ್ನು ಲಗಾಡಿ ತೆಗೆದದ್ದು ಬಿಜೆಪಿ ಅನ್ನುವ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಇದನ್ನು ಈಗ ತಪ್ಪಿಸಿಕೊಂಡಂತಾಗಿದೆ. ಇದು ಮುಂದಿನ ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವರವಾಗಿ ಪರಿಣಮಿಸಲಿದೆ.
ಈಗಾಗಲೇ ಶಿವಸೇನೆ ಠಾಕ್ರೆ ಮನೆತನದ ಹಿಡಿತದಲ್ಲಿದೆ. ಜೊತೆಗೆ ಠಾಕ್ರೆ ಮನೆತನಕ್ಕೆ ಜನರ ಬೆಂಬಲವೂ ಸಾಕಷ್ಟಿದೆ. ಶಿವಸೇನೆಯವರೇ ಮುಖ್ಯಮಂತ್ರಿಯಾದರೇ ಪಕ್ಷದ ಹಿಡಿತ ಠಾಕ್ರೆ ಮನೆತನದಿಂದ ಜಾರುತ್ತದೆ ಮತ್ತು ಜನ ಕೂಡಾ ಶಿಂಧೆ ಕಡೆ ಒಲವು ತೋರಿಸುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಬಿಜೆಪಿ ಇದರಿಂದ ಸಾಕಷ್ಟು ಲಾಭ ಗಳಿಸಲಿದೆ.
Discussion about this post