ನವದೆಹಲಿ : ಗುಜರಾತ್ ನಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಜಜುಲೈ 26 ರಿಂದ 9 ಹಾಗೂ 11ನೇ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಶೇ 50ರಷ್ಟು ಆಸನ ವ್ಯವಸ್ಥೆಯೊಂದಿಗೆ ಭೌತಿಕವಾಗಿ ತರಗತಿಗಳನ್ನು ನಡೆಸಬಹುದಾಗಿದೆ.
ಈ ಬಗ್ಗೆ ಗುಜರಾತ್ ಸಿಎಂ ವಿಜಯ್ ರೂಪಾನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ದೈಹಿಕ ಶಿಕ್ಷಣ ತರಗತಿಗೆ ಹಾಜರಾತಿ ಕಡ್ಡಾಯವಾಗಿಲ್ಲ. ಜೊತೆಗೆ ಎಂದಿನಂತೆ ಆನ್ ಲೌನ್ ಶಿಕ್ಷಣ ಕೂಡಾ ಮುಂದುವರಿಯಲಿದೆ. ಶಾಲೆಯಲ್ಲಿ ದೈಹಿಕ ತರಗತಿಗೆ ಹಾಜರಾಗಲು ಸಿದ್ದವಿರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರವನ್ನು ತರುವುದು ಕಡ್ಡಾಯ.
ಕಳೆದ ವಾರ ಗುಜರಾತ್ ನಲ್ಲಿ 12 ನೇ ತರಗತಿ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ರಾಜ್ಯ ಸರಕ್ರಾ ಅನುಮತಿ ನೀಡಿತ್ತು. ಇನ್ನು ಶಾಲೆಗಳಲ್ಲಿ ಕೊರೋನಾ ನಿಯಮ ಪಾಲಿಸುವುದು ಕಡ್ಡಾಯ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
Discussion about this post