ಸಂಜಯ್ ಆರೋರಾ (Sanjay arora) ಭಾರತೀಯ ಪೊಲೀಸ್ ಸೇವಾ ವಿಭಾಗದಲ್ಲಿ ವಿಶಿಷ್ಟ ಹೆಸರು. ಅವರು ನಡೆದುಕೊಂಡು ಬಂದ ಹಾದಿಯೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ.
ನವದೆಹಲಿ : ದೆಹಲಿ ಪೊಲೀಸ್ ಆಯುಕ್ತರಾಗಿದ್ದ ರಾಜೇಶ್ ಆಸ್ಥಾನಾ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ಆಯುಕ್ತರ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಆರೋರಾ (Sanjay arora) ಅವರನ್ನು ದೆಹಲಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಅವರು ಇನ್ನು ಮುಂದೆ ರಾಜಧಾನಿಯ ಪೊಲೀಸ್ ಮುಖ್ಯಸ್ಥರಾಗಲಿದ್ದಾರೆ.
ವೀರಪ್ಪನ್ ಗ್ಯಾಂಗ್ ಅನ್ನು ಸದೆ ಬಡಿಯುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಟಾಸ್ಕ್ ಫೋರ್ಸ್ ನ ಭಾಗವಾಗಿದ್ದ ಆರೋರಾ, (Sanjay arora) ಕಾಡುಗಳ್ಳನನ್ನು ಬಲ ಹೀನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಶೌರ್ಯ ಪದಕವನ್ನು ಕೂಡಾ ಅವರ ಗಳಿಸಿದ್ದರು.
ಇದನ್ನೂ ಓದಿ : Chakravarthy sulibele : ನಿರ್ವೀರ್ಯ ಸರ್ಕಾರಕ್ಕೆ ಇನ್ನೆಷ್ಟು ಪ್ರವೀಣರು ಹೆಣವಾಗಬೇಕು…
ಪ್ರಸ್ತುತ ಇಂಡೋ ಟಿಬೆಟ್ ಗಡಿ ( ITBP) ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಆರೋರಾ (Sanjay arora) ಇಂದು ದೆಹಲಿ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂಡೋ ಟಿಬೆಟ್ ಗಡಿ ( ITBP) ಪೊಲೀಸ್ ಮಹಾ ನಿರ್ದೇಶಕರಾಗುವ ಮುನ್ನ CRPF ನಲ್ಲಿ Special Director General ಆಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ : police officers transfer : ಬೆಳ್ಳಾರೆ ಲಾಠಿ ಜಾರ್ಜ್ : ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಿದ ರಾಜ್ಯ ಸರ್ಕಾರ
1997 ರಿಂದ 2002ರ ತನಕ ITBP ನಲ್ಲಿ commandant ಆಗಿ ಸೇವೆ ಸಲ್ಲಿಸಿದ್ದರು. 2000ದಿಂದ 2002ರ ತನಕ ITBP ಅಕಾಡೆಮಿಯಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು.
ಜೈಪುರ ಎನ್ಐಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪದವಿ ಪಡೆದ ಅವರು ಐಪಿಎಸ್ ಸೇವೆ ಸೇರ್ಪಡೆಗೊಂಡ ಬಳಿ ತಮಿಳುನಾಡಿನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. 2002 ರಿಂದ 2004 ರ ತನಕ ಕೊಯಂಬತ್ತೂರು ಪೊಲೀಸ್ ಆಯುಕ್ತರಾಗಿದ್ದ ಆರೋರಾ ವಿಲ್ಲಪುರಂ ವಿಭಾಗದ DIG ಯಾಗಿದ್ದರು. ಬಳಿಕ ಭ್ರಷ್ಟಚಾರ ನಿಗ್ರಹದಳದ ನಿರ್ದೇಶಕರಾಗಿಯೂ ನೇಮಕಗೊಂಡಿದ್ದರು.
ಚೆನೈ ನಗರ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ, ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ, ಆಡಳಿತ ಮತ್ತು ನಿರ್ವಹಣೆ ವಿಭಾಗದ ADGPಯಾಗಿದ್ದ ಆರೋರಾ ನಂತರ ಕೇಂದ್ರ ಸೇವೆಗೆ ತೆರಳಿದ್ದರು.
ಈ ನಡುವೆ ತಮ್ಮ ವೃತ್ತಿ ಜೀವನದಲ್ಲಿ IG (Special Operations) BSF, IG Chhattisgarh Sector CRPF and IG Operations CRPF, ADG HQ & Ops CRPF and Spl DG J&K Zone CRPF ಆಗಿಯೂ ಸೇವೆ ಸಲ್ಲಿಸಿದ್ದಾರೆ.
Discussion about this post