ಸಾಯಿ ಪಲ್ಲವಿ sai pallavi ಕೊಟ್ಟ ಹೇಳಿಕೆ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಸಾಗಾಣಿಕೆ ಮಾಡುವವರ ಹತ್ಯೆ ಒಂದೇ ಎಂದು ಹೇಳಿರುವುದೇ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ
ಕೆಲ ವಾರಗಳ ಹಿಂದೆ ಸಂದರ್ಶನವೊಂದರಲ್ಲಿ ಕಾಶ್ಮೀರ ಪಂಡಿತರ ಮತ್ತು ಗೋ ಸಾಗಾಣಿಕೆದಾರರ ಹತ್ಯೆಯನ್ನು ಹೋಲಿಸಿ sai pallavi ಮಾತನಾಡಿದ್ದರು. ಅವರು ಕೊಟ್ಟ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧ ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿತ್ತು.
ವಿರಾಟ ಪರ್ವಂ ಸಿನಿಮಾ ಪ್ರಚಾರದ ವೇಳೆ ಸಾಯಿ ಪಲ್ಲವಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರ ಮೇಲೆ ಹಲ್ಲೆ ಮಾಡುವುದು ತಪ್ಪು. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಸಾಗಿಸುತ್ತಿದ್ದ ಮುಸ್ಲಿಂ ಡ್ರೈವರ್ ಮೇಲಿನ ಹಲ್ಲೆ ಎರಡೂ ಕೂಡಾ ಒಂದೇ ಅಂದಿದ್ದರು. ಇದಾದ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಅವರು ಪ್ರತೀ ಜನ ಮುಖ್ಯ ಅಂದಿದ್ದರು. ಈ ವಿವಾದದಿಂದಲೇ ವಿರಾಟ ಪರ್ವಂ ಸಿನಿಮಾ ಸೋತಿತು ಅನ್ನುವ ಮಾತುಗಳು ಕೇಳಿ ಬಂತು.
ಈ ನಡುವೆ ಸಾಯಿ ಪಲ್ಲವಿ ವಿರುದ್ಧ ಹಲವು ಕಡೆಗಳಲ್ಲಿ ದೂರು ಕೂಡಾ ದಾಖಲಾಗಿದೆ. ಈ ನಡುವೆ ಹೈದರಬಾದ್ ಸುತಲ್ತಾನ್ ಬಝಾರ್ ಇನ್ಸ್ ಪೆಕ್ಟರ್ ಕೊಟ್ಟ ನೋಟಿಸ್ ರದ್ದುಗೊಳಿಸುವಂತೆ ಸಾಯಿ ಪಲ್ಲವಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದೆ.
ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ನ್ಯಾಯಾಧೀಶರು, ಸತ್ಯಾಸತ್ಯತೆ ಅರಿಯುವ ನಿಟ್ಟಿನಲ್ಲಿ ಸಾಯಿ ಪಲ್ಲವಿ ಪೊಲೀಸ್ ವಿಚಾರಣೆ ಎದುರಿಸಬೇಕು ಅಂದಿದೆ. ಹೈದರಬಾದ್ ಭಜರಂಗದಳದ ಸದಸ್ಯ ಅಖಿಲ್ ಅನ್ನುವವರು ಕೊಟ್ಟ ದೂರಿನ ಹಿನ್ನಲೆಯಲ್ಲಿ ಸುಲ್ತಾನ್ ಬಝಾರ್ ಇನ್ಸ್ ಪೆಕ್ಟರ್ ನೋಟಿಸ್ ಜಾರಿ ಮಾಡಿದ್ದರು.
ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು
ಮಗಳು ಸಂಭ್ರಮಿಸಲಿ ಎಂದು ತಂದೆ ವಜ್ರದ ಉಂಗುರ ಕೊಡಿಸಿದ್ದರು. ಆದರೆ ಮಗಳು ಅದೇ ಉಂಗುರ ಬಳಸಿ ತಂದೆಯ ಉಸಿರು ನಿಲ್ಲಿಸಿದ್ದಾಳೆ ( Crime news )
ಜಾರ್ಖಂಡ್ : ಮಗಳೇ ನನ್ನ ಕೊಲೆ ಮಾಡುತ್ತಾಳೆ ಅದ್ಯಾವ ತಂದೆ ಊಹಿಸಲು ಸಾಧ್ಯ. ಸಾಕಿ ಬೆಳೆಸಿದ ತಂದೆಯನ್ನೇ ಕೊಲೆ ಮಾಡುವ ಮಗಳಿದ್ದಾಳೆ ಅಂದ್ರೆ ಅಧರ್ಮ ತಾಂಡವವಾಡುತ್ತಿದೆ ಅನ್ನುವುದಕ್ಕೆ ಬೇರೆ ಉದಾಹರಣೆ ಬೇಕಾ ( Crime news )
ಜೂನ್ 29 ರಂದು ಜಾರ್ಖಂಡ್ ನ ಸೆಕರೈಲ ಕಸ್ವರ್ನ್ ಜಿಲ್ಲೆಯ ಉದ್ಯಮಿ ಕನ್ಹಯ್ಯ ಸಿಂಗ್ ( Kanhaiya Singh) ಅನ್ನುವವರನ್ನು ಅಪರಿಚಿತರು ಗುಂಡು ಹೊಡೆದು ಸಾಯಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ ಕೊಲೆಗಾರರನ್ನು ಹಿಡಿಯೋದು ಸುಲಭವಿರಲಿಲ್ಲ. ಉದ್ಯಮಿ ಕನ್ಹಯ್ಯ ಸಿಂಗ್ ಅವರಿಗೆ ಶತ್ರುಗಳು ಇರಲಿಲ್ಲ, ಜೊತೆಗೆ ಯಾವುದೇ ವ್ಯವಹಾರ ವ್ಯಾಜ್ಯಗಳಿರಲಿಲ್ಲ. ಹೀಗಾಗಿ ಕೊಲೆಯಾಕಾಯ್ತು ಅನ್ನುವ ಸುಳಿವೇ ಇರಲಿಲ್ಲ.
ಇದೇ ಕಾರಣದಿಂದ ಪ್ರಕರಣದ ತನಿಖೆ ಸಲುವಾಗಿ ಹರ್ವಿಂದರ್ ಸಿಂಗ್ ನೇತೃತ್ವದಲ್ಲಿ ( Harvinder Singh ) special investigation team (SIT) ರಚಿಸಲಾಯ್ತು. ಟೆಕ್ನಿಕಲ್ ಸಾಕ್ಷಿಗಳ ಆಧಾರದಲ್ಲಿ ಎಸ್ಐಟಿ ತನಿಖೆ ಪ್ರಾರಂಭಿಸಿದಾಗ ಉದ್ಯಮಿ ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ ( Aparna Singh ) ಮೇಲೆಯೇ ಅನುಮಾನ ಬಂದಿದೆ. ಹೀಗಾಗಿ ಅಪರ್ಣಾ ಸಿಂಗ್ ಮೇಲೆ ತನಿಖೆಯನ್ನು ಕೇಂದ್ರಿಕರಿಸಿದಾಗ ಮರ್ಡರ್ ಮಿಸ್ಟರಿ ಬಿಚ್ಚಿಕೊಳ್ಳತೊಡಗಿತು. ಇದಕ್ಕಾಗಿ ಕನ್ಹಯ್ಯ ಸಿಂಗ್ ಮನೆ ಸುತ್ತಮುತ್ತಲಿನ ಅದೆಷ್ಟು ಸಿಸಿಟಿವಿಗಳನ್ನು ಪೊಲೀಸರು ಜಾಲಾಡಿದ್ದಾರೋ ಗೊತ್ತಿಲ್ಲ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೆರೈಕೆಲಾ ಖಾರ್ಸಾವನ್ ಜಿಲ್ಲಾ ಎಸ್ಪಿ ಆನಂದ ಪ್ರಕಾಶ್ ( Superintendent of Police, Seraikela-Kharsawan Anand Prakash ) ಅಪರ್ಣಾ ಸಿಂಗ್ ಕಳೆದ 5 ವರ್ಷಗಳಿಂದ ರಾಜ್ ವೀರ್ ಸಿಂಗ್ ಅನ್ನುವವನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಸಂಬಂಧ ಕನ್ಹಯ್ಯ ಸಿಂಗ್ ಗೆ ಇಷ್ಟವಿರಲಿಲ್ಲ. ಹೀಗಾಗಿ ರಾಜ್ ವೀರ್ ಸಿಂಗ್ ಮನೆ ಬಳಿ ಹೋಗಿದ್ದ ಕನ್ಹಯ್ಯ ಸಿಂಗ್, ಮಗಳ ಹಿಂದೆ ಬೀಳದಂತೆ ಎಚ್ಚರಿಕೆ ನೀಡಿದ್ದ. ಮಾತ್ರವಲ್ಲದೆ ಪಿಸ್ತೂಲ್ ತೋರಿಸಿ ಮನೆಯವರನ್ನೂ ಬೆದರಿಸಿದ್ದ.
ಕನ್ಹಯ್ಯ ಸಿಂಗ್ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ ವೀರ್ ಸಿಂಗ್ ಕುಟುಂಬ ತಮ್ಮ ವಾಸ ಸ್ಥಳವನ್ನೂ ಬದಲಾಯಿಸಿದ್ದರು. ತಮ್ಮ ಸ್ವಂತ ಆಸ್ತಿಯನ್ನು ಮಾರಿ ಬಾಡಿಗೆ ಮನೆ ಸೇರಿಕೊಂಡಿದ್ದರು. ಈ ನಡುವೆ ಮಗಳಿಗೆ ಬೇರೆ ಮದುವೆ ಮಾಡಿಸಲು ಕನ್ಹಯ್ಯ ಸಿಂಗ್ ಸಿದ್ದತೆ ಮಾಡಿಕೊಳ್ಳತೊಡಗಿದೆ.
ಹೀಗೆ ಬಿಟ್ಟರೆ ಪ್ರೀತಿ ಕುತ್ತು ಎಂದು ಅರಿತ ಅಪರ್ಣಾ ಸಿಂಗ್ ಮತ್ತು ರಾಜ್ ವೀರ್ ಸಿಂಗ್ ಕನ್ಹಯ್ಯ ಸಿಂಗ್ ನನ್ನೇ ಮುಗಿಸಲು ನಿರ್ಧರಿಸಿದರು. ಈ ಸಲುವಾಗಿ ರಾಜ್ ವೀರ್ ಸಿಂಗ್ ಶೂಟರ್ ನಿಖಿಲ್ ಗುಪ್ತ ಅನ್ನುವವನನ್ನು ಸಂಪರ್ಕಿಸಿದ. 8500 ರೂಪಾಯಿ ಕೊಟ್ಟು ಬಿಹಾರದಿಂದ ಕಂಟ್ರಿ ಮೇಡ್ ಪಿಸ್ತೂಲ್ ಬೇರೆ ತರಿಸಿಕೊಂಡ್ರು.
ಇದನ್ನೂ ಓದಿ : Crime news Aparna Singh : ಅಪ್ಪ ಗಿಫ್ಟ್ ಕೊಟ್ಟ ವಜ್ರದುಂಗರವೇ ಸುಪಾರಿ : ಪ್ರೀತಿಗೆ ಅಡ್ಡ ಬಂದ ತಂದೆಯನ್ನೇ ಮುಗಿಸಿದ ಮಗಳು
Discussion about this post