ನವದೆಹಲಿ : ಉಕ್ರೇನ್ ಮೇಲೆ ಮುಗಿಬಿದ್ದಿರುವ ರಷ್ಯಾ ಸೇನೆ, ತನ್ನ ಗುರಿ ತಲುಪುವ ಯತ್ನದಲ್ಲಿದೆ. ಯುದ್ಧ ನೀತಿಗಳನ್ನು, ನಿಯಮಗಳನ್ನು ಗಾಳಿಗೆ ತೂರಿರುವ ರಷ್ಯಾ ಸೇನೆ ರಾಕ್ಷಸರಂತೆ ವರ್ತಿಸಲಾರಂಭಿಸಿದೆ. ಯುದ್ಧದಲ್ಲಿ ನಾಗರಿಕರಿಗೆ ಹಾನಿಯಾಗಬಾರದೆನ್ನುವ ಒಪ್ಪಂದವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಮತ್ತೊಂದು ಕಡೆ ಉಕ್ರೇನ್ ಸೇನೆ ರಷ್ಯಾ ವಿರುದ್ಧ ಇನ್ನಿಲ್ಲದ ಹೋರಾಟ ಮುಂದುವರಿಸಿದೆ. ಸೋಲಿನ ಭಯ ಕಾಡುತ್ತಿದ್ದರೂ ಗೆಲ್ಲತ್ತೇವೆ ಅನ್ನುವ ಭರವಸೆಯೊಂದಿಗೆ ಹೋರಾಡುತ್ತಿದೆ.
ಈ ನಡುವೆ 6 ದಿನಗಳ ಯುದ್ಧದಲ್ಲಿ 6 ಸಾವಿರ ರಷ್ಯನ್ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಮೇಲೆ ಅಕ್ರಮಣ ಮಾಡಿರುವ ರಷ್ಯ ಸೇನೆಯ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ ಅಂದಿದ್ದಾರೆ.
ಯುದ್ಧದ 7ನೇ ದಿನದ ಹೊತ್ತಿಗೆ ರಷ್ಯಾದ 30 ಯುದ್ಧ ವಿಮಾನ, 211 ಯುದ್ಧ ಟ್ಯಾಂಕ್, 21 ಹೆಲಿಕಾಫ್ಟರ್ ಹಾಗೂ 862 ಶಶಸ್ತ್ರ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.
Discussion about this post