ನಾಗಪುರ : ದೇಶದ ಹಲವು ಭಾಗಗಳಲ್ಲಿ ಮಸೀದಿಯಲ್ಲಿ ಹಿಂದೂ ದೇವರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿರುವ ನಡುವೆ ಆರ್ ಎಸ್ ಎಸ್ ಕಡೆಯಿಂದ ಅಚ್ಚರಿಯ ಹೇಳಿಕೆ ಹೊರ ಬಿದ್ದಿದೆ. ಕಾಶಿ ಗ್ಯಾನ್ ವಾಪಿ ಸೇರಿದಂತೆ ವಿವಿಧ ಮಸೀದಿಗಳ ಬಗ್ಗೆ ವಿವಾದ ಪ್ರಾರಂಭವಾದ ಬೆನ್ನಲ್ಲೇ ಮಾತನಾಡಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರತೀ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ ಅಂದಿದ್ದಾರೆ.
ನಾಗಪುರದಲ್ಲಿ ಆರ್ ಎಸ್ ಎಸ್ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ, ಜಗಳವನ್ನು ಯಾಕೆ ಹೆಚ್ಚಿಸಬೇಕು. ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಯಾಕೆ ಹುಡುಕಬೇಕು ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಮುಸ್ಲಿಮರು ಹೊರಗಿನವರಲ್ಲ. ಅವರೂ ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರೇ. ಇತಿಹಾಸವನ್ನು ನಾವು ಮಾಡಿದ್ದಲ್ಲ. ಇಂದಿನ ಹಿಂದೂ ಮುಸ್ಲಿಂರೂ ಕೂಡಾ ಅದನ್ನು ಮಾಡಿಲ್ಲ ಅಂದಿದ್ದಾರೆ.
ಭಾರತದ ಮೇಲೆ ಇಸ್ಲಾಂ ರಾಜರು ದಂಡೆತ್ತಿ ಬಂದ ಸಂದರ್ಭದಲ್ಲಿ ಗ್ಯಾನವಾಪಿ ನಿರ್ಮಾಣದಂತಹ ಘಟನೆಗಳು ನಡೆದಿದೆ. ಈ ವೇಳೆ ನೂರಾರು ದೇಗುಲಗಳು ನಾಶವಾಗಿದೆ. ಹಾಗಂತ ದಿನಕ್ಕೊಂದು ವಿವಾದ ಯಾಕೆ ಬೇಕು. ಎಲ್ಲಾ ಮಸೀದಿಗಳಲ್ಲೂ ಶಿವಲಿಂಗ ಯಾಕೆ ಹುಡುಕಬೇಕು ಅಂದಿದ್ದಾರೆ.
ಕೆಲ ಐತಿಹಾಸಿಕ ಕಾರಣ ಮತ್ತು ಪರಿಸ್ಥಿತಿಗೆ ಅನುಗುಣಗುಣವಾಗಿ ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆಱ್ ಎಸ್ ಎಸ್ ಪಾಲ್ಗೊಂಡಿತ್ತು.. ಇನ್ನು ಮುಂದೆ ಇಂತಬ ಹೋರಾಟದಲ್ಲಿ ಭಾಗಿಯೋದಿಲ್ಲ ಎಂದು ಹಿಂದೆಯೇ ಹೇಳಿದ್ದೇವು. ಈಗ್ಲೂ ನಮ್ಮ ಈ ನಿಲುವಿನಲ್ಲಿ ಬದಲಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದವನ್ನು ಮತ್ತೊಂದು ಅಯೋಧ್ಯೆ ವಿವಾದವಾಗಿಸಬೇಕು ಎನ್ನುವ ಪ್ರಯತ್ನಗಳಿಗೆ ಭಾಗವತ್ ಅವರ ಈ ಹೇಳಿಕೆ ತಣ್ಣೀರು ಎರಚಿದೆ.
Shivling’ controversy in Varanasi’s Gyanvapi mosque: Hindu and Muslim petitioners are fighting a legal battle over a court-ordered filming of the mosque complex to check whether there are idols of Hindu Gods and Goddesses
Discussion about this post