Sunday, March 7, 2021

ಸುಮಲತಾ ಗೆಲ್ತಾರೆ….. ಫಲಿತಾಂಶದ ದಿನ ಮಂಡ್ಯಕ್ಕೆ ಬರ್ತಿನಿ

Must read

- Advertisement -
- Advertisement -

ಮಂಡ್ಯ ಲೋಕಸಭೆಯ ಫಲಿತಾಂಶದ ಕುರಿತಂತೆ ಒಳ್ಳೆ ವಾತಾವರಣ ಇದೆ. ಈಗಲೇ ಗೆಲುವಿನ ಅಂತರ ಹೇಳಿದರೆ ಕೊಚ್ಚಿಕೊಂಡ ಹಾಗಾಗುತ್ತದೆ. ಮಂಡ್ಯ ಫಲಿತಾಂಶವನ್ನು ನಿರ್ದಿಷ್ಟವಾಗಿ ಹೇಳೋಕಾಗುತ್ತಿಲ್ಲ. ಜನ ಹೀಗೂ ಆಗಬಹುದು, ಹಾಗೂ ಆಗಬಹುದು ಎಂದು ಮಾತನಾಡುತ್ತಿದ್ದಾರೆ.ಆದರೆ ಸುಮಲತಾ ಅವರು ಗೆಲ್ಲುವುದು ಪಕ್ಕಾ ಎಂದು ನಟ ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು ಚುನಾವಣೆ ಬಳಿಕ ನಾನು ಮಂಡ್ಯಕ್ಕೆ ಬಂದಿಲ್ಲ ಅನ್ನುವ ಆರೋಪಕ್ಕೆ ಉತ್ತರಿಸಿ,ಜೋಡೆತ್ತುಗಳು ಮಂಡ್ಯದಲ್ಲಿ ಕಾಣ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೌದು ನಾವು ಪ್ರಚಾರಕ್ಕೆ ಬಂದಿದ್ದೆವು, ಹೋದೆವು. ಆದರೆ ಅಭ್ಯರ್ಥಿ ಬಂದಿದ್ದಾರಲ್ಲ ಎಂದರು.

ಜೊತೆಗೆ ಚುನಾವಣೆ ಮುಗಿದ ಮೇಲೆ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿಲ್ಲ. ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಬಾರಿ ಮಂಡ್ಯಕ್ಕೆ ಬಂದಿದ್ದೆ. ನಮಗೇನು ಮಂಡ್ಯ ಹೊಸದಲ್ಲ, ಚುನಾವಣೆಗೂ ಮುನ್ನವೂ ಮಂಡ್ಯ ಗೊತ್ತು. ಚುನಾವಣೆ ಆದ ಮೇಲೂ ಗೊತ್ತು. ಚುನಾವಣೆ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾ ಮಾತನಾಡುತ್ತಿದ್ದೆ. ಈಗ ನಮ್ಮ ಹುಡುಗರೊಬ್ಬರ ಗೃಹ ಪ್ರವೇಶ ಇತ್ತು ಅದಕ್ಕೆ ಮಂಡ್ಯಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಫಲಿತಾಂಶ ಬಂದ ದಿನ ಸಾಧ್ಯವಾದ್ರೆ ಮಂಡ್ಯಕ್ಕೆ ಬರುತ್ತೇನೆ ಎಂದು ಯಶ್ ತಿಳಿಸಿದ್ದಾರೆ.

- Advertisement -
- Advertisement -
- Advertisement -

Latest article