Advertisements

ಶುರುವಾಯ್ತು ಟೆಂಪಲ್ ರನ್ : ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಸುಮಾರು 10 ಕಿಲೋಮೀಟರ್ ಉದ್ದದ ಕಡಿದಾದ ಮೆಟ್ಟಿಲನ್ನೇರಿ ರಾಹುಲ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.

ರಾಹುಲ್ ಕೇವಲ ಎರಡು ಗಂಟೆಗಳಲ್ಲಿ ಬೆಟ್ಟವನ್ನು ಏರಿದ್ದು,ಅಲಿಪಿರಿಯಲ್ಲಿ ಬೆಟ್ಟ ಹತ್ತಲು ಪ್ರಾರಂಭಿಸಿದ ರಾಹುಲ್ ಬಳಿಕ ದೇವಸ್ಥಾನದ ಅತಿಥಿ ಗೃಹದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು ದೇವಾಲಯ ಪ್ರವೇಶಿಸಿದರು.

ವೆಂಕಟೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿದ ರಾಹುಲ್ ಗಾಂಧಿಗೆ ಅರ್ಚಕರು ಪವಿತ್ರ ರೇಷ್ಮೆ ವಸ್ತ್ರ, ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.

ದೇವಸ್ಥಾನ ಭೇಟಿ ಬಳಿಕ ರಾಹುಲ್ ತಿರುಪತಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ಆಯೋಜಿತವಾಗಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.

Advertisements

One Comment on “ಶುರುವಾಯ್ತು ಟೆಂಪಲ್ ರನ್ : ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ

  1. Pingback: ಸುಮಲತಾ ಗೆಲ್ತಾರೆ….. ಫಲಿತಾಂಶದ ದಿನ ಮಂಡ್ಯಕ್ಕೆ ಬರ್ತಿನಿ – torrentspree

Leave a Reply

%d bloggers like this: