ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಪ್ರಿಯಾಂಕ ವಾದ್ರಾ ಬರಬೇಕು ಅನ್ನುವ ಕಾರ್ಯಕರ್ತರ ಕೂಗಿನ ನಡುವೆ ಪ್ರಿಯಾಂಕ ಪತಿ ( Robert Vadra )ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆಯೇ ಅನ್ನುವ ಕುತೂಹಲ ಪ್ರಾರಂಭವಾಗಿದೆ
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿರುವುದರ ವಿರುದ್ಧ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ9Robert Vadra) ಕಿಡಿ ಕಾರಿದ್ದಾರೆ. ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿರುವ ವಾದ್ರಾ ಅಗತ್ಯ ಬಿದ್ದರೆ ರಾಜಕೀಯಕ್ಕೆ ಪ್ರವೇಶಿಸುವುದಾಗಿಯೂ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಅನ್ನು ಮುನ್ನಡೆಸುವ ಸುಳಿವು ಕೊಟ್ಟಿದ್ದಾರೆ.
News about Robert Vadra
ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಪ್ರಿಯಾಂಕ ವಾದ್ರಾ ಪತಿ ( Robert Vadra) ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡ ಒಬ್ಬ ಬಿಜೆಪಿ ನಾಯಕನ ಹೆಸರನ್ನು ಹೇಳಿ ಎಂದು ಸವಾಲು ಎಸೆದಿದ್ದಾರೆ. ತನ್ನ ನೀತಿಗಳ ಬಗ್ಗೆ ದೇಶದಲ್ಲಿ ಅಸಮಾಧಾನವೆದ್ದಿದೆ ಅನ್ನುವದು ಗೊತ್ತಾಗುತ್ತಿದ್ದಂತೆ ಬಿಜೆಪಿ ಗಾಂಧಿ ಕುಟುಂಬಕ್ಕೆ ತೊಂದರೆ ಕೊಡಲು ಆರಂಭಿಸುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈಗ ಜಿಎಸ್ಟಿ ವಿಚಾರವಾಗಿ ಜನ ಅಸಮಾಧಾನಗೊಂಡಿದ್ದಾರೆ ಹೀಗಾಗಿ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸುತ್ತಿದೆ ಅಂದಿದ್ದಾರೆ.
ಇದನ್ನೂ ಓದಿ : ra ra rakkamma : ರಾ ರಾ ರಕ್ಕಮ್ಮ ತಂದಿಟ್ಲು ಸಂಕಷ್ಟ
ಇನ್ನು ತಮ್ಮ ರಾಜಕೀಯ ಪ್ರವೇಶದ ಸುಳಿವು ಕೊಟ್ಟಿರುವ ವಾದ್ರಾ ಈ ದೇಶದಲ್ಲಿ ಬದಲಾವಣೆ ಅಗತ್ಯವಿದೆ ಮಾತ್ರವಲ್ಲೂ ಅದರ ಅವಶ್ಯಕತೆಯೂ ಇದೆ. ದೇಶಕ್ಕೆ ಬೇಕಾಗಿರುವ ಬದಲಾವಣೆಯನ್ನು ನಾನು ತರಬಲ್ಲೆ ಎಂದು ಜನರಿಗೆ ಅನಿಸಿದರೆ, ನಾನು ರಾಜಕೀಯ ಪ್ರವೇಶಿಸುತ್ತೇನೆ ಅಂದಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಸ್ಥಾನಕ್ಕೆ ಅಮಿತ್ ಶಾ ಆಪ್ತನ ಎಂಟ್ರಿ
ಅರುಣ್ ಸಿಂಗ್ ಕಾರ್ಯ ವೈಖರಿ ಬಗ್ಗೆ ಬಿಜೆಪಿ ವರಿಷ್ಠರು ಅಸಮಾಧಾನ ಹೊಂದಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ತಡೆಯಲು ಸಾಧ್ಯವಾಗಿಲ್ಲ ಅನ್ನುವುದಕ್ಕೆ ಇದಕ್ಕೆ ಕಾರಣ. ಹೀಗಾಗಿ ಅಮಿತ್ ಶಾ ಆಪ್ತ ರಾಜ್ಯಕ್ಕೆ ಬರುತ್ತಿದ್ದಾರಂತೆ
ಬೆಂಗಳೂರು : ರಾಜ್ಯದಲ್ಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಬಿಜೆಪಿಯಲ್ಲಿ ಬದಲಾವಣೆ ಪರ್ವ ಪ್ರಾರಂಭಗೊಂಡಿದೆ. ಈಗಾಗಲೇ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಅರುಣ್ ಕುಮಾರ್ ಅವರನ್ನು ಬದಲಾಯಿಸಲಾಗಿದ್ದು ಆ ಜಾಗಕ್ಕೆ ಯುವ ಮುಖವನ್ನು ಪರಿಚಯಿಸಲಾಗಿದೆ. ರಾಜೇಶ್ ಕುಂತೂರು ಅವರಿಗೆ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವಧಿ ಮುಕ್ತಾಯಗೊಳ್ಳುತ್ತಿದ್ದು, ಆ ಜಾಗಕ್ಕೆ ಶೋಭಾ ಕರಂದ್ಲಾಜೆಯವರನ್ನು ಕರೆ ತರುವ ಸಾಧ್ಯತೆಗಳಿದೆ. ಈ ಮೂಲಕ ಒಕ್ಕಲಿಗ ಮತಗಳತ್ತ ದೃಷ್ಟಿ ನೆಟ್ಟಿರುವ ಕಾಂಗ್ರೆಸ್ ಅನ್ನು ಕಟ್ಟಿ ಹಾಕುವುದು ಬಿಜೆಪಿ ನಾಯಕರ ಪ್ರಯತ್ನ.
ಇನ್ನು ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರನ್ನು ಬದಲಾಯಿಸುವ ಮಾತುಗಳು ಕೇಲಿ ಬರುತ್ತಿದೆ. ಅರುಣ್ ಸಿಂಗ್ ಅವರಿಂದ ರಾಜ್ಯದಲ್ಲಿ ಪಕ್ಷ ಬಲವರ್ಧನೆ ಸಾಧ್ಯವಾಗಿಲ್ಲ. ಚುನಾವಮೆ ಹೊಸ್ತಿಲಲ್ಲಿ ಪಕ್ಷ ಸಂಘಟನೆ ಕಾರ್ಯ ಚುರುಕುಪಡೆದಿಲ್ಲವಂತೆ. ಹೀಗಾಗಿ ಅಮಿತ್ ಶಾ ಆಪ್ತ ವಿನೋದ್ ತಾವಡೆ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸುವ ಸಾಧ್ಯತೆಗಳಿದೆ.
ತಾವಡೆ ಮಹಾರಾಷ್ಟ್ರ ಮೂಲದವರಾಗಿದ್ದು, ಶಾಸಕರಿಗೂ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಮಹಾರಾಷ್ಟ್ರ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
Discussion about this post