ಗಂಡ ಬದುಕಿರುವಾಗಲೇ ಮಂಗಳಸೂತ್ರ ತೆಗೆದಿಟ್ರೆ, ತಾಳಿ ಕಟ್ಟಿದವನಿಗೆ ಏನಾಗಬೇಡ. ಹೇಗಾಗಬೇಡ ( Mangalsutra madras high court )
ಚೆನೈ : ಗಂಡ ಕಟ್ಟಿದ ಮಾಂಗಲ್ಯವನ್ನು ಆತ ಜೀವಂತವಿರುವಾಗಲೇ ( Mangalsutra madras high court )ತೆಗೆದಿಡುವುದು ಪತಿಗೆ ನೀಡುವ ಅತ್ಯಂತ ಹೆಚ್ಚಿನ ಮಾನಸಿಕ ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಡಿವೋರ್ಸ್ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳ ಸೂತ್ರದ ಮಹತ್ವವನ್ನು ಸಾರಿ ಹೇಳಿದೆ.
ತಾಳಿಯು ಪವಿತ್ರವಾದ ವಿಷಯವಾಗಿದೆ. ಇದು ವಿವಾಹ ಜೀವನದ ನಿರಂತರೆಯನ್ನು ಸೂಚಿಸುತ್ತದೆ. ಗಂಡ ಸಾವಿನ ನಂತರವೇ ತಾಳಿ ತೆಗೆಯಲಾಗುತ್ತದೆ. ಬದುಕಿರುವಾಗಲೇ ತಾಳಿ ತೆಗೆದಿಡುವುದು ಗಂಡನಿಗೆ ನೀಡುವ ಮಾನಸಿಕ ಹಿಂಸೆ ಇದು ಪತಿಯ ಭಾವನೆಗಳನ್ನು ನೋಯಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ : Justice UU Lalit : ಮಕ್ಕಳು 7 ಗಂಟೆಗೆ ಶಾಲೆಗೆ ಹೋಗುವುದಾದ್ರೆ ಕೋರ್ಟ್ 9ಗಂಟೆಗೆ ತೆರೆಯಬಾರದ್ಯಾಕೆ : ನ್ಯಾ.ಲಲಿತ್
ಈರೋಡ್ ಕಾಲೇಜಿನ ಪ್ರೊ. ಸಿ ಶಿವಕುಮಾರ್ ಪತ್ನಿಗೆ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಡಿವೋರ್ಸ್ ಸಿಕ್ಕಿರಲಿಲ್ಲ. ಇದನ್ನು ಪ್ರಶ್ನಿಸಿ ಪ್ರೊಫೆಸರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪತ್ನಿ ತಾಳಿ ತೆಗೆದಿಟ್ಟಿರುವುದನ್ನು ಗಮನಿಸಿದ ನ್ಯಾಯಮೂರ್ತಿ ವಿಎಂ ವೇಲುಮಣಿ ಹಾಗೂ ಎಸ್ ಸೌಂದರ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದೇ ವೇಳೆ ನಾನು ತಾಳಿಯನ್ನು ಉಳಿಸಿಕೊಂಡು ಸರವನ್ನು ಮಾತ್ರ ಬದಲಾಯಿಸಿದ್ದೇನೆ ಎಂದು ಪತ್ನಿ ವಾದಿಸಿದ್ದಾರೆ. ಆದರೆ ಕೋರ್ಟ್ ಈ ವಾದವನ್ನು ಮಾನ್ಯ ಮಾಡಲಿಲ್ಲ. ಹೀಗಾಗಿ ಹೈಕೋರ್ಟ್ ಈಗ ಅರ್ಜಿಯನ್ನು ಮಾನ್ಯ ಡಿವೋರ್ಸ್ ಗೆ ಅನುಮತಿ ನೀಡಿದೆ.
ನಮ್ಮ ಕಣ್ಣುಗಳನ್ನು ದಾನ ಮಾಡಲು ರೆಡಿಯಾಗಿದ್ದೇವೆ : ಉರ್ಫಿಯ ಹೊಸ ಅವತಾರ ಕಂಡವರ ಮಾತು
ಈ ಬಿಟ್ಟಿ ನೆಟ್ ಬಂದ ಮೇಲೆ ಕೆಲ ಸೆಲೆಬ್ರೆಟಿಗಳಿಗೆ ಏನು ಮಾಡಬೇಕು ಅಂತಾನೇ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದೇ ಸೆಲೆಬ್ರೆಟಿಸಂ ಅಂದುಕೊಂಡಿದ್ದಾರೆ. ಆ ಸಾಲಿಗೆ ಸೇರ್ಪಡೆ ಉರ್ಫಿ
ಈ ಉರ್ಫಿ ಜಾವೇದ್ ಅನ್ನುವ ನಟಿ ಕ್ಯಾಮರ ಮುಂದೆ ಪೋಸ್ ನೀಡುವುದೇ ಕಸುಬನ್ನಾಗಿಸಿದ್ದಾರೆ. ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರ ವಿಚಿತ್ರ ಬಟ್ಟೆ ಹಾಕಿ ಮಿಂಚುವ ಮೂಲಕ ಸುಲಭವಾಗಿ ಕಾಸು ಗಳಿಸುತ್ತಿದ್ದಾರೆ. ಒಂದಿಷ್ಟು ಸೋಷಿಯಲ್ ಮೀಡಿಯಾಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫೋಟೋ, ವಿಡಿಯೋ ವೈರಲ್ ಆದಷ್ಟು ಕಾಸು ಬಾಚಿಕೊಳ್ಳುತ್ತಿದ್ದಾರೆ.
ಹೀಗಾಗಿಯೇ ನಟನೆಗಿಂತಲೂ ಹೆಚ್ಚಾಗಿ ಈ ರೀತಿಯ ಬಟ್ಟೆ ಧರಿಸಿ ಫೇಮಸ್ ಆಗಿದ್ದಾರೆ. ಪಡ್ಡೆ ಹುಡುಗರ ಹೊಟ್ಚೆಗೆ ಚಿಟ್ಟೆ ಬಿಟ್ಟು ಮಜಾ ನೋಡುತ್ತಿದ್ದಾರೆ. ಮೊನ್ನೆ ಮೊನ್ನೆ ಗೋಣಿ ಚೀಲದಿಂದ ಮಾಡಿ ಬಟ್ಟೆ ಹಾಕಿ ಸುದ್ದಿಯಾಗಿದ್ದರು. ಅದರ ಬೆನ್ನಲ್ಲೇ ಬಿಕಿನಿಗೆ ಹೂವು ಅಂಟಿಸಿಕೊಂಡು ಬಂದು ಸೋಷಿಯಲ್ ಮೀಡಿಯಾದಲ್ಲೇ ರಸ ಹೀರುವ ಹುಡುಗರಿಗೆ ಕೆಲಸ ಕೊಟ್ಟಿದ್ದರು.
ಅದರ ಬೆನ್ನಲ್ಲೇ ಇದೀಗ ಜಿಲೇಬಿಯೋ, ಚಕ್ಕುಲಿಯೋ ಗೊತ್ತಿಲ್ಲ ಅದನ್ನೇ ಹೋಲುವ ಬಟ್ಟೆಯೊಂದನ್ನು ಹಾಕಿಕೊಂಡು ಬಂದಿದ್ದಾರೆ. ಈ ವಿಡಿಯೋ ಕಂಡ ಅನೇಕರು ಚಿತ್ರ ವಿಚಿತ್ರ ಕಮೆಂಟ್ ಹಾಕುತ್ತಿದ್ದಾರೆ. ಕೆಲವರಂತು ಇಂತಹ ಫೋಟೋ ವಿಡಿಯೋ ನೋಡಿ ಸಾಕಾಗಿದೆ ನಮ್ಮ ಕಣ್ಣುಗಳನ್ನು ನಾವು ದಾನ ಮಾಡುತ್ತೇವೆ ಅಂದಿದ್ದಾರೆ.
Discussion about this post