ಬೆಂಗಳೂರು : ವುಹಾನ್ ವೈರಸ್ ಸೃಷ್ಟಿಸಿದ ಆತಂಕ ಒಂದಲ್ಲ ಎರಡಲ್ಲ. ಕೊರೋನಾ ಬಂದು ಗಂಭೀರ ಪರಿಸ್ಥಿತಿಗೆ ಹೋದ ಮಂದಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಕೊರೋನಾ ಬಾರದಿದ್ದರೂ ಮನೆಯಲ್ಲೇ ಸೇಫ್ ಆಗಿರುವ ಮಕ್ಕಳು ಬೇರೆ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಕೊರೋನಾದಿಂದ ರಕ್ಷಿಸಲು ಹೋದ್ರೆ ಮತ್ತೊಂದು ಸಮಸ್ಯೆಯನ್ನು ಎದುರಿಸುವಂತಾಗಿದೆ.
ಅದರಲ್ಲೂ ಲಾಕ್ ಡೌನ್, ಕೊರೋನಾ ಕಾರಣದಿಂದ ವಿಟಮಿನ್ ಕೊರತೆ ತೀವ್ರವಾಗಿ ಕಾಡಲಾರಂಭಿಸಿದೆ. ಕೊರೋನಾ ಕಾರಣದಿಂದ ಮಕ್ಕಳಿಗೆ ಇದೀಗ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ಮೊಬೈವ್ ಮೇಲೆ ದೃಷ್ಟಿ ನೆಡುವುದರಿಂದ ಮಕ್ಕಳ ಕಣ್ಣಿನ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದೆ. ಜೊತೆಗೆ ಹೊರಗಡೆ ಹೋಗದೆ ಮನೆಯ1ಳಗಡೆ ಬಂಧಿಯಾಗಿರುವುದರಿಂ ಡಿ ವಿಟಮಿನ್ ಸಮಸ್ಯೆ ಕಾಣಿಸಲಾರಂಭಿಸಿದೆ.
ಮಕ್ಕಳು ಶಾಲೆಗೆ ಹೋದ್ರೆ ಸೂರ್ಯನ ಕಿರಣಗಳು ಮಕ್ಕಳ ಮೈ ಮೇಲೆ ಬೀಳುತ್ತದೆ. ಇದರಿಂದ ಸಾಕಷ್ಟು ಪ್ರಮಾಣ ವಿಟಮಿನ್ ಡಿ ಸಿಗುತ್ತದೆ. ಜೊತೆಗೆ ಹೊರಾಂಗಣ ಆಟ, ಪಾರ್ಕ್ ಎಂದು ಸುತ್ತಾಡುವುದನ್ನೇ ಮಕ್ಕಳು ಮರೆತಿದ್ದಾರೆ. ಹೀಗಾಗಿ ಸೂರ್ಯನ ಕಿರಣ ಸೋಂಕುವುದೇ ಕಷ್ಟವಾಗಿದೆ.
ಮೂಳೆ, ಮಾಂಸಖಂಡ, ಹೃದಯ, ಚರ್ಮ ಸೇರಿದಂತೆ ನಾನಾ ಅಂಗಾಂಗಳ ರಕ್ಷಣೆಯಲ್ಲಿ ವಿಟಮಿನ್ ಡಿಯದ್ದು ಮಹತ್ವದ ಪಾತ್ರ. ಹೀಗಾಗಿ ಇದರ ಕೊರತೆಯಾದರೆ ಆರೋಗ್ಯದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳಬಹುದು. ಹೀಗಾಗಿ ಸಾಕಷ್ಟು ಮುಂಜಾಗ್ರತ ಕ್ರಮಗಳೊಂದಿಗೆ ಬೆಳಗಿನ ಸೂರ್ಯನ ಕಿರಣಗಳು ಮಕ್ಕಳ ಮೈ ಮೇಲೆ ಬೀಳುವಂತೆ ಪೋಷಕರು ನೋಡಿಕೊಳ್ಳುವುದು ಉತ್ತಮ ಅನ್ನುತ್ತಾರೆ ವೈದ್ಯರು.
Discussion about this post