ಜಮ್ಮು : ನಾಪತ್ತೆಯಾಗಿದ್ದ ಭಾರತೀಯ ವಾಯು ಸೇನೆಯ ಯೋಧನ ಶವಕ್ಕಾಗಿ ಕಳೆದ 75 ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯವನ್ನು ಅಂತ್ಯಗೊಳಿಸಲಾಗಿದೆ. ಯೋಧನ ಪಾರ್ಥಿವ ಶರೀರ ಸಿಕ್ಕ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ( Ranjit Sagar Dam ) ರಂಜಿತ್ ಸಾಗರ್ ಅಣೆಕಟ್ಟೆಯಲ್ಲಿ ಸೇನಾ ಹೆಲಿಕಾಪ್ಟರ್ ( Rudra helicopter ) ಪತನವಾಗಿತ್ತು. ಈ ವೇಳೆ ಹೆಲಿಕಾಫ್ಟರ್ ನಲ್ಲಿದ್ದ ಸಹ ಪೈಲೆಟ್ ಹಾಗೂ ಪೈಲೆಟ್ ಅಣೆಕಟ್ಟೆ ಪಾಲಾಗಿದ್ದರು. ತಕ್ಷಣ ಶೋಧ ಕಾರ್ಯವನ್ನು ಪ್ರಾರಂಭಿಸಿದ್ದ ರಕ್ಷಣಾ ಪಡೆಗಳು ಆಗಸ್ಟ್ 15 ರಂದು ಪೈಲೆಟ್ ಲೆ.ಅಭಿಜಿತ್ ಸಿಂಗ್ ಬಾತ್ ಅವರ ಶವವನ್ನು ಹೊರ ತೆಗೆದಿತ್ತು.

ಇದಾದ ಬಳಿಕ ಸಹ ಪೈಲೆಟ್ ಕ್ಯಾ ಜಯಂತ್ ಜೋಶಿಗಾಗಿ ಹುಡುಕಾಟ ಮುಂದುವರಿದಿತ್ತು. ಇದೀಗ 75 ದಿನಗಳ ಬಳಿಕ ರಂಜಿತ್ ಸಾಗರ್ ಅಣೆಕಟ್ಟೆಯಿಂದ ಜಯಂತ್ ಜೋಶಿ ಶವ ಹೊರ ತೆಗೆಯಲಾಗಿದೆ. ಭಾನುವಾರ ಮುಂಜಾನೆ 2 ಗಂಟೆಯ ವೇಳೆಗೆ ರಕ್ಷಣಾ ಕಾರ್ಯಾಚರಣೆಯ ಯೋಧರಿಗೆ ಜೋಶಿ ಶವ ಸಿಕ್ಕಿತ್ತು.
ಸೇನೆಯ ಮಾಹಿತಿ ಪ್ರಕಾಶ ಜೋಶಿಯವರ ಶವ 65 ರಿಂದ 70 ಮೀಟರ್ ಆಳದಲ್ಲಿ ಸಿಲುಕಿತ್ತು. ulti-beam sonar equipment ಮೂಲಕ scan ನಡೆಸಿದ ವೇಳೆ ಶವ ಪತ್ತೆಯಾಗಿದೆ.
Discussion about this post