ಒಂದೇ ಕೊಠಡಿಯಲ್ಲಿ ಪವಿತ್ರಾ ಲೋಕೇಶ್ ಜೊತೆ ನರೇಶ್ – ರಮ್ಯ ರಘುಪತಿ ದಾಳಿಗೆ ಬೆದರಿ ಪರಾರಿ
ಮೈಸೂರು : ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಅನುಮಾನ ನಿಜವಾಗಿದ್ದ. ನರೇಶ್ ಮತ್ತು ಪವಿತ್ರಾ ಲೋಕೇಶ್ ಒಂದೇ ಮನೆಯಲ್ಲಿ ಕೂತು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ ಅನ್ನುಮಾನ ಎದ್ದಿತ್ತು. ಇಬ್ಬರ ವಿಡಿಯೋ ಬ್ಯಾಕ್ ಗ್ರೌಂಡ್ ನೋಡಿದ ಮಂದಿ ಇಬ್ಬರೂ ಒಂದೇ ಕಡೆ ಇದ್ದಾರೆ ಅಂದಿದ್ದರು.
ಈ ನಡುವೆ ಮೈಸೂರಿನ ಹುಣಸೂರು ರಸ್ತೆಯ ಹೋಟೇಲ್ ಗೆ ದಾಳಿ ನಡೆಸಿದ ನರೇಶ್ ಮೂರನೇ ಪತ್ನಿ ರಮ್ಯ ರಘುಪತಿ, ಪವಿತ್ರಾ ಮತ್ತು ನರೇಶ್ ಜೊತೆಯಾಗಿದ್ದ ಕೊಠಡಿ ಮುಂದೆ ಧರಣಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ ಕಾರಣ ರಮ್ಯ ಕಡೆಯಿಂದ ಚಪ್ಪಲಿ ಸೇವೆಯನ್ನು ನರೇಶ್ ತಪ್ಪಿಸಿಕೊಂಡಿದ್ದಾರೆ.
ಇದನ್ನೂ ಓದಿ : ಹೋಟೆಲ್ ನ ಒಂದೇ ಕೊಠಡಿಯಲ್ಲಿ ಸಿಕ್ಕಿ ಬಿದ್ದ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್
ಈ ವೇಳೆ ನರೇಶ್ ರಮ್ಯಾ ಮೇಲೆ ಕೂಗಾಡಿದ್ದು, ವಂಚಕಿ, ಮೋಸಗಾರ್ತಿ ಎಂದೆಲ್ಲಾ ಕಿರುಚಾಡಿದ್ದಾರೆ. ಈ ವೇಳೆ ಪವಿತ್ರಾ ಲೋಕೇಶ್ ಮೌನವಾಗಿದ್ದರು.
ಒಟ್ಟಿನಲ್ಲಿ ಈ ಬೆಳವಣಿಗೆ ನರೇಶ್ ರಮ್ಯ ಡಿವೋರ್ಸ್ ಪ್ರಕರಣಕ್ಕೆ ಹೊಸ ತಿರುವು ತಂದುಕೊಡುವ ಸಾಧ್ಯತೆಗಳಿದೆ. ಇಷ್ಟು ದಿನಗಳ ಕಾಲ ಟಿವಿ ಕ್ಯಾಮಾರ ಮುಂದೆ ಏನೇನೋ ಮಾತನಾಡಿದ ನರೇಶ್ ಮತ್ತು ಪವಿತ್ರಾ ಮಾಧ್ಯಮಗಳ ಕ್ಯಾಮಾರ ಮುಂದೆ ಸಿಕ್ಕು ತಲೆ ತಗ್ಗಿಸುವಂತಾಗಿದೆ.
Discussion about this post