ಬೆಂಗಳೂರು : ಕಾಮಲೀಲೆ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲಾಗಿದೆ.
ಸಿಡಿ ಲೇಡಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು IPC 376C, IPC 354 A ಮತ್ತು IPC 504 & 506, IPC 417 ಅಡಿ ಎಫ್ ಐ ಆರ್ ದಾಖಲಿಸಿದ್ದಾರೆ. ಜೊತೆಗೆ ಜೊತೆಗೆ ಐಟಿ ಕಾಯ್ದೆ 67 A ಅನ್ನು ಕೂಡಾ ಸೇರಿಸಿಕೊಳ್ಳಲಾಗಿದೆ.
ಈ ಐಪಿಸಿ ಕಾಯ್ದೆಯನ್ನು ವಿವರವಾಗಿ ನೋಡುವುದಾದರೆ IPC 376C – ಅಧಿಕಾರ ಬಳಸಿ ಅತ್ಯಾಚಾರ, IPC 354 A – ಲೈಂಗಿಕ ದೌರ್ಜನ್ಯ, IPC 504 & 506 – ಜೀವ ಬೆದರಿಕೆ , IPC 417 – ವಂಚನೆ ಮತ್ತು
ಐಟಿ ಕಾಯ್ದೆ 67 A ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹಂಚಿರುವ ಆರೋಪ ಸೇರಿದೆ.
ಆರೋಪ ಸಾಬಿತಾದ್ರೆ 6 ರಿಂದ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿ ಬರಬಹುದು.
ಇನ್ನು ಈ ಸೆಕ್ಷನ್ ಗಳನ್ನು ನೋಡಿದ್ರೆ ಜಾರಕಿಹೊಳಿ ಬಂಧನದ ಸಾಧ್ಯತೆಗಳಿದೆ. ಹಾಗಿದ್ದರೂ ಅದು ತನಿಖಾಧಿಕಾರಿಯ ವಿವೇಚನಕ್ಕೆ ಬಿಟ್ಟ ವಿಚಾರವಾಗಿದೆ.
ಒಂದು ವೇಳೆ ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟರೆ ಜಾರಕಿಹೊಳಿಯ ಬಂಧನವಾಗಬಹುದು.
Discussion about this post