ಅಭಿಮಾನಿಗಳ ಪಾಲಿನ “ಡಿ ಬಾಸ್” ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.
ತಮ್ಮ ಮುಂದಿನ ಚಿತ್ರ ‘ರಾಬರ್ಟ್’ ಥೀಮ್ ಪೋಸ್ಟರ್ ಬಿಡುಗಡೆಗೊಳಿಸಿದ ನಟ ಅದನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ” ಎಂದು ಬರೆದುಕೊಂಡಿರುವ ದರ್ಶನ್ “ರಾಬರ್ಟ್” ಚಿತ್ರದ ಪೋಸ್ಟರ್ ಹಾಕಿಕೊಂಡಿದ್ದಾರೆ.
ಚಿತ್ರದಲ್ಲಿ ದೈತ್ಯ ಬೈಕನ್ನೇರಿ ಕುಳಿತ ದರ್ಶನ್ ವಿಭಿನ್ನ ಕೋಟ್ ತೊಟ್ಟಿದ್ದಾರೆ. ಅವರೆದುರು ಸಾಲುಗಟ್ಟಿ ನಿಂತಿರುವ ವಾಹನಗಳನ್ನು ಕಾಣಬಹುದಾಗಿದೆ. ಆದ್ರೆ ಪೋಸ್ಟರ್ ನಲ್ಲಿ ದರ್ಶನ್ ಮುಖ ಮಾತ್ರ ಕಾಣದಿರುವುದಕ್ಕೆ ಅಭಿಮಾನಿಗಳಿಗೆ ನಿರಾಶೆಯಾಗಿದೆ.
Discussion about this post