Advertisements

ಪ್ರಿಯಾಂಕ ರಾಜಕೀಯ ಎಂಟ್ರಿ ಕಂಡು ಭಾವಪರವಶನಾದ ಪತಿ

ಪ್ರಿಯಾಂಕಾ ವಾದ್ರಾ ಅವರ ರಾಜಕೀಯ ಪಯಣ ಇಂದು ಭರ್ಜರಿ ರೋಡ್‌ ಶೋ ಮೂಲಕ ಆರಂಭವಾಗಿದೆ.

ಈ ಸಂದರ್ಭದಲ್ಲಿ ಆಕೆಯ ಪತಿ ರಾಬರ್ಟ್‌ ವಾದ್ರಾ ಭಾವಪರವಶರಾಗಿದ್ದು ದೇಶದ ಜನರಲ್ಲಿ ತಮ್ಮ ಕೋರಿಕೆ ಮಂಡಿಸಿದ್ದಾರೆ ಈ ಸಂಬಂಧ ಟ್ವೀಟ್ ಮಾಡಿರುವ ವಾದ್ರಾ ‘ಪ್ರಿಯಾಂಕಾಳನ್ನು ನಿಮ್ಮ ಕೈಗೊಪ್ಪಿಸುತ್ತಿದ್ದೇನೆ. ಆಕೆಯ ಸುರಕ್ಷೆಯನ್ನು ದಯವಿಟ್ಟು ನೋಡಿಕೊಳ್ಳಿ’ ಅಂದಿದ್ದಾರೆ.

”ರಾಜಕೀಯ ರಂಗ ಅತ್ಯಂತ ಕೆಟ್ಟು ಹೋಗಿರುವ ಇಂದಿನ ದಿನಗಳಲ್ಲಿ ಪ್ರಿಯಾಂಕಾಳ ಸುರಕ್ಷೆಯನ್ನು ನೋಡಿಕೊಳ್ಳುವಂತೆ ನಿಮ್ಮಲ್ಲಿ (ದೇಶದ ಜನರಲ್ಲಿ) ನಾನು ವಿನಂತಿಸುತ್ತಿದ್ದೇನೆ” ಎಂದು ವಾದ್ರಾ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾಳನ್ನು ವಾದ್ರಾ Perfect Wife ಎಂದು ಅಪಾರ ಪ್ರೀತಿ, ಮೆಚ್ಚುಗೆಯಿಂದ ಕರೆದಿದ್ದಾರೆ.

ಪ್ರಿಯಾಂಕಾ ಗಾಂಧಿಯನ್ನು ಈಚೆಗಷ್ಟೇ ಪೂರ್ವ ಉತ್ತರ ಪ್ರದೇಶದ ಪ್ರಭಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದ್ದು ಆ ಸಂದರ್ಭದಲ್ಲಿ ಅಭಿನಂದನೆಗಳು ಪ್ರಿಯಾಂಕಾ; ನಿನ್ನ ಬದುಕಿನ ಪ್ರತಿಯೊಂದು ಹಂತದಲ್ಲಿ ನಾನು ನಿನ್ನ ಜತೆಗಿದ್ದೇನೆ. ನಿನ್ನಿಂದ ಸಾಧ್ಯವಿರುವ ಉತ್ಕೃಷ್ಟತೆಯನ್ನೇ ಕೊಡು ! ಎಂದು ವಾದ್ರಾ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದರು

Advertisements

2 Comments on “ಪ್ರಿಯಾಂಕ ರಾಜಕೀಯ ಎಂಟ್ರಿ ಕಂಡು ಭಾವಪರವಶನಾದ ಪತಿ

  1. Pingback: ಉಗ್ರರ ಅಟ್ಟಹಾಸ : ಮಾಧ್ಯಮಗೋಷ್ಟಿ ರದ್ದುಗೊಳಿಸಿದ ಪ್ರಿಯಾಂಕ ವಾದ್ರಾ – torrentspree

  2. Pingback: ರಂಜಾನ್‌ಗೆ ಡಿ ಬಾಸ್ ಗಿಫ್ಟ್… ‘ರಾಬರ್ಟ್’ ಥೀಮ್ ಪೋಸ್ಟರ್ ರಿಲೀಸ್ – torrentspree

Leave a Reply

%d bloggers like this: