ವಿಶ್ವದ ಅತ್ಯಂತ ಖಾರದ ಮೆಣಸು ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಾಗಲ್ಯಾಂಡ್ ನ ರಾಜಾ ಮಿರ್ಚಿ Raja Mircha ಲಂಡನ್ ಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸಿದೆ, Geographical Indications (GI) product ಅನ್ನುವ ಹಿರಿಮೆಗೆ ಪಾತ್ರವಾಗಿರುವ ಈ ಮೆಣಸನ್ನು ಗುವಾಹಟಿ ವಿಮಾನ ನಿಲ್ದಾಣದಿಂದ ಲಂಡನ್ ಗೆ ಕಳುಹಿಸಿಕೊಡಲಾಗಿದೆ.
Bhoot Jolokia ಹಾಗೂ Ghost pepper ಎಂದು ಇದನ್ನು ಕರೆಯಲಾಗುತ್ತದೆ. ಈ ಮೆಣಸು ಅದೆಷ್ಟು ಖಾರ ಅಂದ್ರೆ ನಾವು ತಿನ್ನು ಸಾಮಾನ್ಯ ಮೆಣಸಿನ ಖಾರಕ್ಕಿಂತ ಮುನ್ನೂರು ಪಟ್ಟು ಅಧಿಕವಂತೆ.
ಇನ್ನು ಈ ಮೆಣಸನ್ನು ರಫ್ತು ಮಾಡುವ ಮುನ್ನ ಪ್ರಯೋಗಾಲಕ್ಕೆ ಜೂನ್ ಹಾಗೂ ಜುಲೈ ನಲ್ಲಿ ಕಳುಹಿಸಿಕೊಡಲಾಗಿತ್ತು. ಸಂಪೂರ್ಣ ಸಾವಯವ ರೀತಿಯಲ್ಲಿ ಇದನ್ನು ಬೆಳೆಯಲಾಗಿದೆ ಎಂದು ಪ್ರಮಾಣ ಪತ್ರ ಸಿಕ್ಕ ಬಳಿಕವೇ ಇದನ್ನು ಲಂಡನ್ ಗೆ ರಫ್ತು ಮಾಡಲಾಗಿದೆ.
Discussion about this post