ನವದೆಹಲಿ :ಇಡಿ ಅಧಿಕಾರಿಗಳು ನನ್ನ ತಾಳ್ಮೆ ಕಂಡು ದಂಗಾಗಿದ್ದರು. ನನ್ನ ತಾಳ್ಮೆಯ ಗುಟ್ಟೇನು ಎಂದು ಪ್ರಶ್ನಿಸಿದ್ದರು ಎಂದು ರಾಹುಲ್ ಗಾಂಧಿ ಕಳೆದ ಬುಧವಾರ ನೀಡಿದ್ದ ಹೇಳಿಕೆಯನ್ನು ಇಡಿ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಯ ಪೈಕಿ ಕೇವಲ ಶೇ20ಕ್ಕೆ ಮಾತ್ರ ರಾಹುಲ್ ಉತ್ತರಿಸಿದ್ದಾರೆ. ಉಳಿದಂತೆ ನಾನು ದಣಿದಿದ್ದೇನೆ, ಸುಸ್ತಾಗಿದೆ ಎಂದು ನುಣುಚಿಕೊಳ್ಳುತ್ತಿದ್ದರು ಎಂದು ಇಡಿ ಮೂಲಗಳು ಹೇಳಿವೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಹುಲ್, ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ತಾಳ್ಮೆಯಿಂದ ನಾನು ಉತ್ತರಿಸುತ್ತಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದರು. ನಿಮ್ಮ ತಾಳ್ನೆಯ ಗುಟ್ಟೇನು ಎಂದು ಪ್ರಶ್ನಿಸಿದರು.
ಇದಕ್ಕೆ ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ತರಬೇತಿ ಪಡೆದಿದ್ದು ಹಾಗೂ ವಿಪಶ್ಯನ ಧ್ಯಾನದಿಂದ ಸಮಾಧಾನದಿಂದ ಉತ್ತರಿಸಲು ಸಾಧ್ಯವಾಯ್ತು ಎಂದು ಹೇಳಿದ್ದಾಗಿ ರಾಗಾ ಹೇಳಿಕೊಂಡಿದ್ದರು.
Discussion about this post