ಈ ಸಾಮಾಜಿಕ ಜಾಲತಾಣ ಎಷ್ಟು ಒಳ್ಳೆಯದು ಮಾಡಿದೆಯೋ ಅಷ್ಟೇ ಕೆಡುಕು ಮಾಡಿದೆ. ಅದರಲ್ಲೂ ರೀಲ್ಸ್ ಹುಚ್ಚು ಕೇಳುವುದೇ ಬೇಡ. ಯುವಜನತೆಯನ್ನು ಸೆನ್ಸ್ ಇಲ್ಲದಂತೆ ಮಾಡಿದೆ. ಅದಕ್ಕೆ ಹೊಸ ಸೇರ್ಪಡೆ ವಿಕ್ರಾಂತ್ ರೋಣದ ರಾ ರಾ ರಕ್ಕಮ್ಮ (ra ra rakkamma)
ಹೈದರಬಾದ್ : ಒಂದು ಸಿನಿಮಾ ಹಾಡು ವೈರಲ್ ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಹಾಡಿನದ್ದೇ ಸದ್ದು. ಅದಕ್ಕೆ ಸರಿಯಾಗಿ ಮಾರುಕಟ್ಟೆ ನೂರಾರು ಶಾರ್ಟ್ ವಿಡಿಯೋ APPಗಳು ಬಂದಿದೆ. ಯುವಜನತೆಯ ಹುಚ್ಚನ್ನು ಬಳಸಿಕೊಳ್ಳುವ APPಗಳು ನಮ್ಮದೇ ಡಾಟಾದಲ್ಲಿ ದುಡ್ಡು ಬಾಚಿಕೊಳ್ಳುತ್ತಿದೆ. ರೀಲ್ಸ್ ಅನ್ನುವುದು ಯಾವಾಗ ಹವ್ಯಾಸದ ಪಟ್ಟ ಕಳಚಿಟ್ಟು ಚಟ ಅನ್ನಿಸಿತೋ, ಆಗ್ಲೇ ಸಮಸ್ಯೆ ಶುರುವಾಗಿದೆ. (ra ra rakkamma)
ಈ ನಡುವೆ ಮೆಟ್ರೋ ನಿಲ್ದಾಣದಲ್ಲಿ ರೀಲ್ಸ್ ಮಾಡಿ ಹೈದರಬಾದ್ ನಲ್ಲಿ ಯುವತಿಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅದು ಕೂಡಾ ಸುದೀಪ್ ನಟನೆಯ Vikrant Ronaದ, ರಾರಾ ರಕ್ಕಮ್ಮ ( ra ra rakkamma) ಹಾಡಿಗೆ ಅನ್ನುವುದು ಗಮನಾರ್ಹ ಅಂಶ. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲಿನ ಒಳಗಡೆ ಈಕೆ ರೀಲ್ಸ್ ಮಾಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದು ಗೊತ್ತಿಲ್ಲ ಅಂದ್ರೆ ಹೇಗೆ ಅನ್ನುವುದು ಇವರ ವಾದ.
ಇದನ್ನೂ ಓದಿ : belgaum honey trap :ರಾಜಕುಮಾರ ಟಾಕಳೆ ನನ್ನ ಗಂಡ : ಬೆಳಗಾವಿ ಹನಿಟ್ರ್ಯಾಪ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಹೈದರಬಾದ್ ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಲು ರಾರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ ಲೋ ಮಾಡಿದ್ಲು. ಈ ಹಾಡು ಸಹಜವಾಗಿಯೇ ವೈರಲ್ ಆಗಿತ್ತು. ತಗೊಳ್ಳಿ ಕೆಲವರು ಈಕೆಯ ಪ್ರತಿಭೆಯನ್ನು ಮೆಚ್ಚಿದ್ರೆ ಮತ್ತೆ ಕೆಲವರು ಅತಿರೇಕದ ವರ್ತನೆ ಎಂದು ಜರೆದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಹೀಗೆಲ್ಲಾ ನಡೆದುಕೊಳ್ಳಬಾರದು ಅಂದಿದ್ದಾರೆ.
ಇನ್ನು ಕೆಲ ಮಂದಿ ಮೆಟ್ರೋ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡಲು, ಡ್ಯಾನ್ಸ್ ಮಾಡಲು ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ರೈಲು ನಿಲ್ದಾಣವನ್ನು ಪಿಕ್ ನಿಕ್ ಸ್ಪಾಟ್ ಮಾಡಿದ್ದು ಯಾವಾಗ, ಇದೇನು ಡ್ಯಾನ್ಸ್ ವೇದಿಕೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗಳಿಂದ ಸುಸ್ತಾದ ಮೆಟ್ರೋ ಅಧಿಕಾರಿಗಳು, ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಜರುಗಿಸುತ್ತೇವೆ ಅಂದಿದ್ದಾರೆ. ಹಾಗಾದ್ರೆ ಈ ರೀತಿ ವಿಡಿಯೋ ಮಾಡಿದ್ದು ಯುವತಿಯೇ ತಪ್ಪಾ…. ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.
Metro Dance: హైదరాబాద్ మెట్రో స్టేషన్లో యువతి నృత్యం.. చర్యలకు సిద్ధమైన అధికారులు pic.twitter.com/XKAc285Eyg
— Eenadu (@eenadulivenews) July 20, 2022
ಅಮೆರಿಕಾ ಯಾತ್ರೆ ಮುಗಿಸಿದ ಚಿತ್ಕಲಾ : ಶೀಘ್ರದಲ್ಲೇ ರತ್ನಮಾಲಾ ರೀ ಎಂಟ್ರೀ
ಚಿತ್ಕಲಾ ಬಿರದಾರ್ ಅಮೆರಿಕಾ ಪ್ರವಾಸವನ್ನು ಸಾಕಷ್ಟು ತಿಂಗಳ ಹಿಂದೆ ಪ್ಲಾನ್ ಮಾಡಿದ್ದರು. ಹೀಗಾಗಿಯೇ ಕನ್ನಡತಿ ಧಾರಾವಾಹಿಯ ಕಥೆಯನ್ನು ಅವರ ಪ್ರವಾಸಕ್ಕೆ ಪೂರಕವಾಗಿ ಕಟ್ಟಿಕೊಡಲಾಗಿತ್ತು
ಕನ್ನಡತಿ ಧಾರಾವಾಹಿ ಮೂಲಕ ರತ್ಮಮಾಲ ಎಂದೇ ಪ್ರಸಿದ್ಧರಾಗಿರುವ ಚಿತ್ಕಲಾ ಬಿರಾದಾರ್ ಅಮೆರಿಕಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಈ ಮೂಲಕ ಕನ್ನಡತಿ ಧಾರಾವಾಹಿಗೆ ಮತ್ತೆ ರೀ ಎಂಟ್ರಿ ಕೊಡುವ ಮುನ್ಸೂಚನೆ ಸಿಕ್ಕಿದೆ. ಚಿತ್ಕಲ್ಕಾ ಮತ್ತು ಜಗದೀಶ್ ತಮ್ಮ ಮದುವೆಯ 30ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಈ ಬಾರಿ ಅಮೆರಿಕಾದಲ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಈ ಹಿಂದೆಯೇ ಪ್ಲಾನ್ ಮಾಡಿದ್ದರು. ಆ ನಿಟ್ಟಿನಲ್ಲಿ ಕನ್ನಡತಿಗೆ ಸಣ್ಣದಾಗಿ ಬ್ರೇಕ್ ಕೊಟ್ಟಿದ್ದರು.
ಇದೇ ಕಾರಣಕ್ಕಾಗಿ ಕನ್ನಡತಿ ಕಥೆಯಲ್ಲೂ ಒಂದಿಷ್ಟು ಬದಲಾವಣೆ ಮಾಡಲಾಗಿತ್ತು. ಹರ್ಷ ಮತ್ತು ಭುವಿಯ ಮದುವೆ ಬೆನ್ನಲ್ಲೇ ಚಿಕಿತ್ಸೆ ಸಲುವಾಗಿ ರತ್ನಮಾಲಾ ಅವರನ್ನು ನಿರ್ದೇಶಕರು ಆಸ್ಪತ್ರೆ ಸೇರಿಸಿದ್ದರು. ಈ ಮೂಲಕ ರತ್ಮಮಾಲಾ ಅನುಪಸ್ಥಿತಿಯಲ್ಲಿ ಕಥೆ ಮುಂದುವರಿಯುವಂತೆ ನೋಡಿಕೊಂಡಿದ್ದರು.
ಇದೀಗ ಅಮೆರಿಕಾ ಪ್ರವಾಸ ಮುಗಿಸಿ ಬಂದಿರುವ ಕಾರಣ, ರತ್ನಮಾಲಾ ಆರೋಗ್ಯ ಸುಧಾರಿಸಿಕೊಂಡು ಕನ್ನಡತಿಗೆ ರೀ ಎಂಟ್ರಿ ಕೊಡುವ ಸಾಧ್ಯತೆಗಳಿದೆ. ಈಗಾಗಲೇ ರತ್ನಮಾಲ ಅನುಪಸ್ಥಿತಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದೆ. ಮಾಲಾ ಶಿಕ್ಷಣ ಸಂಸ್ಥೆಯಲ್ಲಿ ಸಾನಿಯಾ ಕಾಟ ತಡೆಯಲಾರದೆ ಭುವಿ ಕೆಲಸ ಬಿಟ್ಟಿದ್ದಾಳೆ. ಇಡೀ ಆಸ್ತಿಯನ್ನು ಭುವಿಗೆ ಹೆಸರಿಗೆ ಬರೆದಿರುವ ವಿಚಾರ ಇನ್ನೂ ಸಾನಿಯಾಗೆ ಗೊತ್ತಿಲ್ಲ. ಹೀಗಾಗಿ ರತ್ನಮಾಲಾ ರೀ ಎಂಟ್ರಿಯ ಬಳಿಕ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.
Discussion about this post