ಬೆಂಗಳೂರು : ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯ ನಟಿ. ಕಿರಿಕ್ ಪಾರ್ಟಿ ಮೂಲಕ ಸಿನಿ ರಂಗಕ್ಕೆ ಬಂದ ರಶ್ಮಿಕಾ, ಸಾರ್ಟ್ ಟೈಮ್ ನಲ್ಲಿ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದಾರೆ.
ತೆಲುಗಿನ ಸೂಪರ್ ಸ್ಟಾರ್ ಗಳ ಜೊತೆಯೂ ಅಭಿನಯಿಸುತ್ತಿರುವ ರಶ್ಮಿಕಾ ಸಂಭಾವನೆ ಕೂಡಾ ಸಿಕ್ಕಾಪಟ್ಟೆ ಏರಿದೆ. ಗೀತಾ ಗೋವಿಂದಂ ನಂತರ ಮಹೇಶ್ ಬಾಬು ಜೊತೆಗಿನ ಸರಿಲೇರು ನಿಕ್ಕೆವರು ಸಿನಿಮಾ ಹಿಟ್ ಆಗಿದ್ದು ರಶ್ಮಿಕಾ ತೆಲುಗಿನಲ್ಲಿ ಭದ್ರವಾಗಿ ನೆಲೆಯೂರಲು ಅನುಕೂಲವಾಗಿದೆ.
ಈ ನಡುವೆ ಕೈ ತುಂಬಾ ಸಂಭಾವನೆ ಪಡೆಯುತ್ತಿರುವ ರಶ್ಮಿಕಾ ಆ ಹಣವನ್ನು ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈಗಾಗಲೇ ಭೂಮಿಯ ಮೇಲೆ ಸಾಕಷ್ಟು ಹೂಡಿಕೆ ಮಾಡಿರುವ ರಶ್ಮಿಕಾ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಪ್ಲಂ ( Plum) ಅನ್ನುವ beauty and personal care brand ನಲ್ಲಿ ಹೂಡಿಕೆ ಮಾಡಿರುವ ರಶ್ಮಿಕಾ, ಇದೇ ಬ್ರಾಂಡ್ ನ brand ambassador ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.
ಪ್ಲಂ ಥಾಣೆ ಮೂಲದ ಕಂಪನಿಯಾಗಿದ್ದು, 2018ರಲ್ಲಿ ಮೊದಲ ಬಾರಿಗೆ ಹೂಡಿಕೆಗೆ ಅವಕಾಶ ನೀಡಿತ್ತು. ಆಗ $50 million ಹೂಡಿಕೆ ಸಂಗ್ರಹಿಸಿದ್ದ ಕಂಪನಿ, ವ್ಯವಹಾರವನ್ನು ವಿಸ್ತರಿಸಿತ್ತು. ಇದೀಗ $35 million ಹೂಡಿಕೆ ಸಂಗ್ರಹಿಸಲಾಗಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ ಹೂಡಿಕೆ ಮಾಡಿದ ಮೊತ್ತವೆಷ್ಟು ಅನ್ನುವುದು ಗೊತ್ತಾಗಿಲ್ಲ.
Discussion about this post