ತಮ್ಮ ಜೊತೆ ಸಚಿವ ನವಜೋತ್ ಸಿಂಗ್ ಸಿಧು ನಡೆಸುತ್ತಿದ್ದ ಶೀತಲ ಸಮರಕ್ಕೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರಿಯಾದ ಉತ್ತರ ಕೊಟ್ಟಿದ್ದಾರೆ.
ಕ್ಯಾಪ್ಟನ್’ ವಿರುದ್ಧ ಬಂಡಾಯ ಸಾರಿರುವ ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧುಗೆ ತಕ್ಕ ಶಿಕ್ಷೆಯಾಗಿದ್ದು, ಸಿಧು ಅವರಿಂದ ಪ್ರವಾಸೋದ್ಯಮ, ಸಂಸ್ಕೃತಿ ಖಾತೆಯನ್ನು ಕಿತ್ತುಕೊಂಡು ಇಂಧನ ಖಾತೆ ನೀಡಲಾಗಿದೆ.
ಪ್ರಾಮಾಣಕತೆ, ದಕ್ಷತೆ ಹೆಚ್ಚಳ ಮಾಡಿ, ಆಡಳಿತವನ್ನು ಇನ್ನಷ್ಟು ಸುಗಮಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕ್ಯಾಪ್ಟನ್ ತಮ್ಮ ತಂಡದ ಬಗ್ಗೆ ಮಾಹಿತಿ ನೀಡಿದ್ದಾರೆ
ಕೆಲವು ಸಚಿವರ ಖಾತೆಗಳನ್ನು ಅಮರೀಂದರ್ ಬದಲಾವಣೆ ಮಾಡಿದ್ದಾರೆ. ನಾಲ್ವರು ಮಂತ್ರಿಗಳ ಖಾತೆ ಮಾತ್ರ ಬದಲಾಗಿಲ್ಲ.
Discussion about this post