ಇದೀಗ ಬಹುಮಾನ ಗೆದ್ದ ಕರ್ಮಕ್ಕೆ ಪೊಲೀಸ್ ಅಮಾನತುಗೊಂಡಿದ್ದಾರೆ. ಬಹುಮಾನ ಗೆದ್ರೆ ಸನ್ಮಾನಿಸಬೇಕು, ಅದನ್ನು ಬಿಟ್ಟು ಮನೆಗೆ ಕಳುಹಿಸೋದ
ಈ ಕ್ರಿಕೆಟ್ ಶುರುವಾದ್ರೆ ಸಾಕು, ಬೆಟ್ಟಿಂಗ್ ದಂಧೆ ಎದ್ದು ನಿಂತುಕೊಳ್ಳುತ್ತದೆ. ಕೆಲವು ಕಡೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ತಾರೆ, ಮತ್ತೆ ಕೆಲವು ಕಡೆ ಪೊಲೀಸರ ಕಣ್ಣಿದ್ದೂ ಕುರುಡಾಗ್ತಾರೆ. ಹಿಂದೊಮ್ಮೆ ಇದೇ ಬೆಟ್ಟಿಂಗ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿ ಬಂದಿತ್ತು ಕೂಡಾ.
ಈಗ ಈ ವಿಷಯ ಯಾಕಪ್ಪ ಅಂದ್ರೆ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರು ಅವರು ಡ್ರೀಮ್ 11 ಆಡಿ 1.5 ಕೋಟಿ ರೂ. ಗೆದ್ದಿದ್ದಾರೆ. ವಿಷಯ ಅವರು ಗೆದ್ದಿರೋದಲ್ಲ, ಬದಲಾಗಿ ಇದೀಗ ಬಹುಮಾನ ಗೆದ್ದ ಕರ್ಮಕ್ಕೆ ಅವರು ಅಮಾನತುಗೊಂಡಿದ್ದಾರೆ. ಬಹುಮಾನ ಗೆದ್ರೆ ಸನ್ಮಾನಿಸಬೇಕು, ಅದನ್ನು ಬಿಟ್ಟು ಮನೆಗೆ ಕಳುಹಿಸೋದ, ಅಲ್ಲೇ ಆಗಿರೋದು ಎಡವಟ್ಟು.
Read More : ಇಪ್ಪತ್ತಾರು ವಾರದ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ನಕಾರ
ಈ ಆನ್ ಲೈನ್ ಆಟಗಳ ಕುರಿತಂತೆ ಈಗಾಗಲೇ ಸಾಕಷ್ಚು ಚರ್ಚೆಗಳು ನಡೆಯುತ್ತಿದೆ. ಆನ್ ಲೈನ್ ಲಾಟರಿಗೇನೂ ಕಡಿಮೆ ಇಲ್ಲದಂತೆ ಚಟ ಹತ್ತಿಸಿಕೊಂಡವರನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ ಈ ಆನ್ ಲೈನ್ ಆಟಗಳು.
ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಠಾಣೆಯ ಪಿಎಸ್ಐ ಸೋಮನಾಥ್ ಜೆಂಡೆ ಡ್ರೀಮ್ 11 ಆಡಿ 1.5 ಕೋಟಿ ರೂ. ಗೆದ್ದಿದ್ದಾರೆ. ಗೆದ್ದ ವಿಷಯವನ್ನು ಹೆಂಡ್ತಿ ಮಕ್ಕಳ ಜೊತೆಗೆ ಹಂಚಿಕೊಂಡು ಮೌನವಾಗಿದ್ರೆ ಸಮಸ್ಯೆಯೇನು ಆಗ್ತಾ ಇರಲಿಲ್ಲ. ಆದರೆ ಕೋಟಿ ಬಂದ ಖುಷಿಯಲ್ಲಿ ವಿಷಯವನ್ನು ಊರೆಲ್ಲಾ ಹಂಚಿದ್ದಾರೆ. ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದೆ.
ಅಷ್ಟೇ ಪ್ರಜ್ಞಾವಂತ ನಾಗರಿಕರು ತಿರುಗಿ ಬಿದ್ದಿದ್ದಾರೆ. ಪೊಲೀಸ್ ಅಧಿಕಾರಿ ಹೀಗೆ ಅನ್ ಲೈನ್ ಗೇಮ್ ಆಡ್ತಾ ಕೂತ್ರೆ ಕೆಲಸ ಮಾಡೋದು ಯಾವಾಗ, ಸರ್ಕಾರಿ ಸಂಬಳ ತಿಂದು ದಾರಿ ತಪ್ಪಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಆಗ್ರಹಿಸಿದ್ದಾರೆ. ಅಷ್ಟೇ ಡ್ರೀಮ್ 11 ಆಡಿ 1.5 ಕೋಟಿ ರೂ. ಗೆದ್ದ ಸೋಮನಾಥ್ ಜೆಂಡೆ ಅವರನ್ನು ಇದೀಗ ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಆಯುಕ್ತ ವಿನಯ್ ಕುಮಾರ್ ಚೌಬೆ ಪ್ರತಿಕ್ರಿಯಿಸಿದ್ದು , ಜೆಂಡೆ ವಿರುದ್ಧ ತನಿಖೆಗೆ ಆದೇಶಿಸಲಾಗಿದ್ದು, ಡಿಸಿಪಿ ಶ್ರೇಣಿಯ ಅಧಿಕಾರಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರಸ್ತುತ ಪ್ರಾಥಮಿಕ ತನಿಖೆ ವರದಿ ಆಧಾರದಲ್ಲಿ ಸೋಮನಾಥ್ ಜೆಂಡೆ ಅವರನ್ನು ಅಮಾನತುಗೊಳಿಸಲಾಗಿದೆ ಅಂದಿದ್ದಾರೆ.
ಅಂದ ಹಾಗೇ ಸೋಮನಾಥ್ ಜೆಂಡೆ ಅವರು ಹಿಂದೆ ನಡೆದ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಪಂದ್ಯದ ವೇಳೆ ಫ್ಯಾಂಟಸಿ ಗೇಮ್ ಆಡಿ 1.5 ಕೋಟಿ ರೂ. ಗೆದ್ದಿದ್ದರು. ಹಾಗಂತ ಕೆಲಸ ಹೋದ್ರು ಚಿಂತೆ ಇಲ್ಲ ತೆರಿಗೆ ಕಳೆದು ದೊಡ್ಡ ಮೊತ್ತವನ್ನೇ ಜೆಂಡೆ ಪಡೆಯಲಿದ್ದಾರೆ. ಮನಸ್ಸು ಮಾಡಿದ್ರೆ ಪಿಎಸ್ಐ ಕೆಲಸವನ್ನು ಮೀರುವಂತ ಸಾಧನೆ ಮಾಡಬಹುದು.
Discussion about this post