ನವದೆಹಲಿ : ಕೊರೋನಾ ಲಸಿಕೆ ಅಭಿಯಾನ ಸಲುವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್ app ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಲಿದ್ದಾರೆ. ಭಾರತದಲ್ಲಿ ಲಸಿಕಾ ವಿತರಣೆ ಯಶಸ್ವಿಯಾಗುವಲ್ಲಿ ಈ app ಕೂಡಾ ಪ್ರಮುಖ ಪಾತ್ರ ವಹಿಸಿದ್ದು, ಇದರ ಯಶೋಗಾಥೆಯನ್ನು ಪ್ರಧಾನಿಗಳು ಜಗತ್ತಿನ ಮುಂದೆ ತೆರೆದಿಡಲಿದ್ದಾರೆ.
3 ಗಂಟೆಗೆ ಆನ್ ಲೈನ್ ಮೂಲಕ ನಡೆಯಲಿರುವ ಸಮಾವೇಶದಲ್ಲಿ ವಿಯೆಟ್ನಾಂ, ಪೆರು, ಮೆಕ್ಸಿಕೋ, ಇರಾಕ್, ಪನಮಾ, ಉಕ್ರೇನ್, ನೈಜೀರಿಯಾ, ಯುಎಇ ಹಾಗೂ ಉಗಾಂಡ ಸೇರಿ 20 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ app ಅನ್ನು ಈ ರಾಷ್ಟ್ರಗಳಲ್ಲೂ ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೋವಿನ್ app ಜರ್ನಿಯನ್ನು ವಿವರಿಸಲಿದ್ದಾರೆ.
ಈ ಹಿಂದೆ ಈ app ಖಾಸಗಿತನಕ್ಕೆ ಧಕ್ಕೆ, ಹ್ಯಾಕಿಂಗ್ ಸೇರಿ ಅನೇಕ ಅಪವಾದಗಳಿಗೆ ಗುರಿಯಾಗಿತ್ತು. ಆದರೆ ಇದೀಗ ಈ app ಸಾಕಷ್ಟು ಸುರಕ್ಷಿತ ಎಂದು ಸಾಬೀತಾಗಿದೆ.
Discussion about this post