ಆಸ್ತಿ ಜಪ್ತಿ ಮಾಡುವುದಾಗಿ ಅಲೋಕ್ ಕುಮಾರ್ ಗುಡುಗಿದ ಬೆನ್ನಲ್ಲೇ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ ( Praveen Nettar )
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ( Praveen Nettar) ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿದೆ. ಇನ್ನು ಈ ಬಂಧನವನ್ನು ಪೊಲೀಸ್ ಮೂಲಗಳು ದೃಢಪಡಿಸಿಲ್ಲ. ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಟಿ ಕರೆದಿದ್ದು, ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.
ನಿನ್ನೆಯಷ್ಟೇ ಮಂಗಳೂರಿನಲ್ಲಿ ಮಾತನಾಡಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ( alok kumar ips) ಪ್ರಮುಖ ಆರೋಪಿಗಳ ಫೋಟೋ, ವಿಳಾಸ ನಮ್ಮ ಬಳಿ ಇದೆ. ವಾರೆಂಟ್ ಜಾರಿಗೊಳಿಸಿ ಆಸ್ತಿ ಜಪ್ತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದೆ.
ಇದನ್ನು ಓದಿ : Praveen Nettar murder case ನಲ್ಲಿ 7 ಆರೋಪಿಯನ್ನು ಬಂಧಿಸಿದ ಖಾಕಿ ಪಡೆ
ಜುಲೈ 26ರಂದು ಸಂಜೆ ಬೆಳ್ಳಾರೆಯ ( Bellare) ಮಾಸ್ತಿಕಟ್ಟೆ ಬಳಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕಡಿದು ಬರ್ಬರವಾಗಿ ಕೊಲೆ ಮಾಡಿದ್ದರು. ಪೈಶಾಚಿಕ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಜೊತೆಗೆ ಸಮಾಜ ದ್ರೋಹಿ ಸಂಘಟನೆಯೂ ಇದರಲ್ಲಿ ಪಾಲುದಾರ ಅನ್ನುವ ವಿಷಯವೂ ಬೆಳಕಿಗೆ ಬಂದಿತ್ತು.
ಇದೇ ಪ್ರಕರಣ ಸಂಬಂಧ ಜುಲೈ 28 ರಂದು ಸವಣೂರಿನ ಜಾಕಿರ್ (29) ಮತ್ತು ಬೆಳ್ಳಾರೆಯ ಶಫೀಕ್ (27) ಎಂಬವರನ್ನು ಬಂಧಿಸಲಾಗಿತ್ತು. ಬಳಿಕ ಆಗಸ್ಟ್ 2 ರಂದು ಬೆಳ್ಳಾರೆ ಪಳ್ಳಿಮಜಲಿನ ಸದ್ದಾಂ (32) ಮತ್ತು ಹ್ಯಾರಿಸ್ (42) ಎಂಬವರನ್ನು ಬಂಧಿಸಲಾಗಿತ್ತು. ಆಗಸ್ಟ್ 6 ರಂದು ಸುಳ್ಯ ನಾವೂರಿನ ಅಬಿದ್ (22) ( Abid (22), son of Yakub, a resident of Mahamayi temple Navoor ) ಮತ್ತು ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ (28) ( Naufal (28), son of Mohammed of Gaurihole,Bellare) ಎಂಬವರನ್ನು ಬಂಧಿಸಲಾಗಿತ್ತು. ಆಗಸ್ಟ್ 9 ರಂದು ಅಬ್ದುಲ್ ಕಬೀರ್ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಮೂವರ ಬಂಧನವಾಗಿದೆ.
ಇನ್ನು ಬಂಧಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಕೊಲೆಗಾರರಿಗೆ ರಕ್ಷಣೆ ನೀಡಿದವರನ್ನು ಕೂಡಾ ಬಂಧಿಸಲು ರಾಷ್ಟ್ರೀಯ ತನಿಖಾ ದಳ ಮಾ,ಟರ್ ಪ್ಲಾನ್ ರೂಪಿಸಿದೆ.
Discussion about this post