ಬಂಧಿತರೆಲ್ಲರೂ ಸ್ಥಳೀಯರಾಗಿದ್ದಾರೆ. (Praveen Nettar murder case) ಹತ್ಯೆ ಸಂಚನ್ನು ಒಂದು ಪಕ್ಷದ ಕಚೇರಿಯಲ್ಲಿ ಕೂತು ರೂಪಿಸಲಾಗಿದೆಯಂತೆ
ಪುತ್ತೂರು : ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ( Praveen Nettar murder case )ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33) ಎಂದು ಗುರುತಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅಬ್ದುಲ್ ಕಬೀರ್ ಬಂಧನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖಚಿತಪಡಿಸಿದ್ದಾರೆ.
ಇದನ್ನು ಓದಿ : Praveen Nettaru murder case: ನೆಟ್ಟಾರು ಕೊಲೆ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ
ಇದೇ ಪ್ರಕರಣ ಸಂಬಂಧ ಜುಲೈ 28 ರಂದು ಸವಣೂರಿನ ಜಾಕಿರ್ (29) ಮತ್ತು ಬೆಳ್ಳಾರೆಯ ಶಫೀಕ್ (27) ಎಂಬವರನ್ನು ಬಂಧಿಸಲಾಗಿತ್ತು. ಬಳಿಕ ಆಗಸ್ಟ್ 2 ರಂದು ಬೆಳ್ಳಾರೆ ಪಳ್ಳಿಮಜಲಿನ ಸದ್ದಾಂ (32) ಮತ್ತು ಹ್ಯಾರಿಸ್ (42) ಎಂಬವರನ್ನು ಬಂಧಿಸಲಾಗಿತ್ತು. ಆಗಸ್ಟ್ 6 ರಂದು ಸುಳ್ಯ ನಾವೂರಿನ ಅಬಿದ್ (22) ( Abid (22), son of Yakub, a resident of Mahamayi temple Navoor ) ಮತ್ತು ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ (28) ( Naufal (28), son of Mohammed of Gaurihole,Bellare) ಎಂಬವರನ್ನು ಬಂಧಿಸಲಾಗಿತ್ತು. ಅಬ್ಗುಲ್ ಕಬೀರ್ ಬಂಧನದೊಂದಿಗೆ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಈಗಾಗಲೇ ಪ್ರಕರಣವನ್ನು NIA ವಹಿಸಲಾಗಿದ್ದು, ಮತ್ತೊಂದು ಕಡೆ ಪೊಲೀಸರ ತನಿಖೆಯೂ ಮುಂದುವರಿದಿದೆ. ಕೊಲೆಗಡುಕರಿಗೆ ಜೈಲಿನಲ್ಲಿ ಬಿರಿಯಾನಿ, ಮೊಬೈಲ್ ಸೌಲಭ್ಯ ಸರ್ಕಾರದ ವತಿಯಿಂದ ಸಿಗದೇ ಹೋದರೆ ಕಠಿಣ ಶಿಕ್ಷೆಯನ್ನು ನಿರೀಕ್ಷೆ ಮಾಡಬಹುದಾಗಿದೆ.
Read : praveen nettar: ಪ್ರವೀಣ್ ನೆಟ್ಟಾರು ಹತ್ಯೆ ಬಗ್ಗೆ ಮಹತ್ವ ಸುಳಿವು : ಕೊಲೆಗಾರರು ಕೇರಳದವರಲ್ಲ.. ದಕ್ಷಿಣ ಕನ್ನಡದವರು
Discussion about this post