ನೆಟ್ಟಾರು ಕುಟುಂಬಕ್ಕೆ ದೂರದ ಬಾಲಿವುಡ್ ನಿಂದ (Manish Mundra) ಸಹಾಯ ಬಂತು, ಚಂದನವನದಿಂದ ಕೊಲೆ ಬಗ್ಗೆ ಒಂದು ಖಂಡನೆಯ ಮಾತು ಕೂಡಾ ಬರಲಿಲ್ಲ. ಸಹಾಯ ಆಮೇಲೆ
ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆ ಚಂದನವನದ ಸೆಲೆಬ್ರೆಟಿಗಳು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. (Manish Mundra) ರಾಕ್ಷಸಿ ಕೃತ್ಯವನ್ನು ಖಂಡಿಸಬೇಕಾದ ಮಂದಿ ವಿಷಯ ಗೊತ್ತೇ ಇಲ್ಲ ಅನ್ನುವಂತಿದ್ದಾರೆ. ಅಮಾಯಕನೊಬ್ಬನ ಹತ್ಯೆಯಾಗಿದೆ ಅಂದ ಮೇಲೆ ಅದನ್ನು ಖಂಡಿಸಲೇಬೇಕು. ಅದಕ್ಕೆ ಜಾತಿ ಧರ್ಮದ ಅಡ್ಡಗೋಡೆಯಿಲ್ಲ.
ಈ ನಡುವೆ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿರುವ ಬಾಲಿವುಡ್ ನಿರ್ಮಾಪಕ ಮನೀಶ್ ಮುಂದ್ರಾ (Manish Mundra) ಪ್ರವೀಣ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. 11 ಲಕ್ಷ ರೂಪಾಯಿ ಮೊತ್ತವನ್ನು ಪ್ರವೀಣ್ ಪತ್ನಿ ನೂತನ ಖಾತೆಗೆ ವರ್ಗಾಯಿಸಿರುವ ಅವರು ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೇರೆಯವರಿಗೂ ಈ ವಿಷಯ ತಿಳಿಯಲಿ ಅನ್ನುವ ಉದ್ದೇಶದಿಂದ ಪ್ರವೀಣ್ ಪತ್ನಿಯ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿರುವ ಮನೀಶ್, ಉಳಿದವರಿಗೂ ಮಾಹಿತಿ ನೀಡಿದ್ದಾರೆ.
ಮನೀಶ್ ಮುಂದ್ರಾ ಅವರು 2017ರಲ್ಲಿ ಧನಕ್ ಅನ್ನುವ ಮಕ್ಕಳ ಸಿನಿಮಾಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಇವರ ನ್ಯೂಟನ್ ಚಿತ್ರ ಆಸ್ಕರ್ ಪ್ರವೇಶ ಪಡೆದಿತ್ತು.
ಇದನ್ನೂ ಓದಿ : Karnataka BJP : ಹಿಂದೂ ಕಾರ್ಯಕರ್ತರಿಗೆ ಮೋಸ : ವಲಸೆ ಬಂದವರನ್ನು ಸಿಎಂ ಮಾಡಿ ಕೈ ಸುಟ್ಟುಕೊಂಡ ಬಿಜೆಪಿ
Discussion about this post