ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. Karnataka BJP ಕಾರ್ಯಕರ್ತರ ನೋವು ನಲಿವುಗಳಿಗೆ ಸ್ಥಳೀಯ ನಾಯಕರು ಸ್ಪಂದಿಸುವುದನ್ನು ಮರೆತಿರುವ ಕರ್ಮಕ್ಕೆ ಹೀಗಾಗಿದೆ
ಮಂಗಳೂರು : ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆಯ ವಿಚಾರವನ್ನೇ ಮುಂದಿಟ್ಟುಕೊಂಡ ಬಿಜೆಪಿ ಆ ಕಾಲದಲ್ಲಿ ನಡೆಸಿದ್ದ ರಾಜಕೀಯದ ಫಲವಾಗಿ ಬಿಜೆಪಿ ಗೆಲುವಿನ ದಡಕ್ಕೆ ಬಂದು ನಿಂತಿತ್ತು. ಆಗ ರಾಜಕೀಯ ನಾಯಕರು ಮಾಡಿದ ಭಾಷಣ ಫಲವಾಗಿ ಬಿಜೆಪಿ ವಿಧಾನಸೌಧದ ಮೂರನೇ ಮೆಟ್ಟಿಲು ಹತ್ತಿತ್ತು.
ಆದರೆ ಈ ನಡುವೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಆಪರೇಷನ್ ಕಮಲ ನಡೆಸಿತ್ತು. ಬಿಜೆಪಿ, ಸಂಘ ಪರಿವಾರ ಹೀಗೆ ಹಿಂದೂ ಸಂಘಟನೆಗಳ ಆಳ ಅರಿವು ಇಲ್ಲದ ಮಂದಿ ಪಕ್ಷದೊಳಗೆ ಎಂಟ್ರಿ ಕೊಟ್ಟಿದ್ದರು. ಇದೇ ಕಾರ್ಯಕರ್ತರ ವಿರುದ್ಧ ಸೆಣಸಾಡಿದ ಮಂದಿಯೇ ಸಚಿವರಾದರು. ಆಗ್ಲೇ ಬಿಜೆಪಿಯ ತಳಮಟ್ಟದಲ್ಲಿ ಅಸಮಾಧಾನ ಪ್ರಾರಂಭವಾಗಿತ್ತು.
ಇದನ್ನೂ ಓದಿ : Prakruti Mishra – babushaan mohanty : ನಟಿ ಜೊತೆ ವಿವಾಹಿತನ ನಟನ ಪ್ರೇಮ ಪ್ರಸಂಗ : ನಡು ರಸ್ತೆಯಲ್ಲೇ ಚಳಿ ಬಿಡಿಸಿದ ಪತ್ನಿ
ಜೆಡಿಎಸ್ ಕಾಂಗ್ರೆಸ್ ನಿಂದ ಬಂದವರಿಗೆ ಕೇಡರ್ ಪಾರ್ಟಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದು ಗೊತ್ತಿರಲಿಲ್ಲ. ಕಾರ್ಯಕರ್ತರೇ ಜೀವಾಳವಾಗಿರುವ ಪಕ್ಷದಲ್ಲಿ ಆಗ್ಲೇ ಹೋರಾಟದ ಕಿಚ್ಚು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಭ್ರಷ್ಟಾಚಾರದ ಆರೋಪವೂ ಕೇಳಿ ಬಂತು.
ಅಲ್ಲಿ ಮೋದಿ ನೋಡಿದರೆ ಭರವಸೆ ಕೊಟ್ಟಂತೆ 370, ತ್ರಿವಳಿ ತಲಾಖ್ ಹೀಗೆ ಅನೇಕ ಕಾನೂನು ಜಾರಿಗೆ ತಂದ್ರು. ಯೋಗಿ ಆದಿತ್ಯನಾಥ್ ಕೂಡಾ ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ದುಷ್ಟ ಶಕ್ತಿಗಳ ವಿರುದ್ಧ ಸಮರ ಸಾರಿದರು. ಆದರೆ ಕರ್ನಾಟಕದಲ್ಲಿ ಆ ಕೆಲಸವಾಗಲಿಲ್ಲ.
ಇದನ್ನೂ ಓದಿ : Chakravarthy sulibele : ನಿರ್ವೀರ್ಯ ಸರ್ಕಾರಕ್ಕೆ ಇನ್ನೆಷ್ಟು ಪ್ರವೀಣರು ಹೆಣವಾಗಬೇಕು…
ಕರಾವಳಿಯ ಮಟ್ಟಿಗೆ ಹೇಳುವುದಾದರೆ ವಿರೋಧಿ ಸಂಘಟನೆಗಳ ವಿರುದ್ಧ ಹೋರಾಡಿದ ಅನೇಕ ಕಾರ್ಯಕರ್ತರು ಇಂದಿಗೂ ಜೈಲಿನಲ್ಲಿದ್ದಾರೆ. ಆದರೆ ಹಿಂದೂ ಸಂಘಟನೆಗಳ ವಿರುದ್ಧ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಸಮರ ಸಾರಿದವರಿಗೆ ಬೇಲ್ ಸಿಕ್ಕಿದೆ ಅನ್ನುವ ಅಳಲು ಇಲ್ಲಿನ ಕಾರ್ಯಕರ್ತರದ್ದು. ಹಿಂದೆ ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಮನಸ್ಥಿತಿ ನಾಯಕರಿಗಿತ್ತು. ಆದರೆ ಈಗ ಹಾಗಿಲ್ಲ.ನಮೋ ಅಂದರೆ ನಮಗೆ ಮೋಸ ಅಂದ ಕಾಂಗ್ರೆಸ್ ನಾಯಕರೇ ಬಿಜೆಪಿ ಸೇರಿದ್ದಾರೆ, ಹಾಗಿದ್ರೆ ನಮ್ಮ ಕಥೆಯೇನು ಅನ್ನುವುದು ಇವರ ಪ್ರಶ್ನೆ.
ಕರಾವಳಿಯ ಬಿಜೆಪಿ ಕಾರ್ಯಕರ್ತರು ಕಾಸಿನಾಸೆಗೆ ದುಡಿಯೋದಿಲ್ಲ.ಇಲ್ಲಿ ಹಿಂದುತ್ವದ ಕಿಚ್ಚಿರುತ್ತದೆ. ನಾಯಕನಾದವನು ರಸ್ತೆ ಬದಿಯಲಿ ಕಾರು ನಿಲ್ಲಿಸಿ ಕಾರ್ಯಕರ್ತರನ್ನು ಮಾತನಾಡಿಸಿದ್ರೆ ಸಾಕು. ಆದರೆ ಇತ್ತೀಚೆಗೆ ಅಧಿಕಾರದ ಮದ ಬಂದ ನಾಯಕರು ಕಾರ್ಯಕರ್ತರನ್ನು ಕಡೆಗಣಿಸಲಾರಂಭಿಸಿದ್ದಾರೆ. ಕಾರ್ಯಕರ್ತರು ಕರೆದ ಕಾರ್ಯಕ್ರಮಗಳಿಗೆ ಹೋಗುವುದನ್ನೂ ನಿಲ್ಲಿಸಿದ್ದಾರೆ. ಕಾರ್ಯಕರ್ತರ ಸಣ್ಣ ಪುಟ್ಟ ಕೆಲಸದ ಮನವಿಗೂ ನಾಯಕರು ಸೊಪ್ಪು ಹಾಕೋದಿಲ್ಲ. ಇದೆಲ್ಲದರ ಫಲವಾಗಿ ಹಿಂದೂ ಕಾರ್ಯಕರ್ತರ ಸಹನೆಯ ಕಟ್ಟೆಯೊಡಿದಿದೆ.

ಹೋಗ್ಲಿ ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಮುಖ್ಯಮಂತ್ರಿಯಾದ್ರೂ ಇದ್ದಾರೆಯೇ, ಇವರು ಕೂಡಾ ವಲಸೆ ಬಂದವರು. ಬಸವರಾಜ್ ಬೊಮ್ಮಾಯಿಯವರಿಗೆ ಸಂಘ ಪರಿವಾರದ ಹಿನ್ನಲೆಯಿಲ್ಲ. ಒಂದು ದಿನವೂ ಅವರು ಹಿಂದೂ ಕಾರ್ಯಕರ್ತರ ಬಗ್ಗೆ ಕಾಳಜಿ ವಹಿಸಿದ ಉದಾಹರಣೆಯಿಲ್ಲ. ಮೊದಲೇ ವಲಸೆ ಬಂದವರೊಬ್ಬರಿಗೆ ಸಿಎಂ ಪಟ್ಟ ಕೊಟ್ಟಿರುವುದು ಕಾರ್ಯಕರ್ತರ ಮನಸ್ಸಿನಲ್ಲಿ ಇತ್ತು. ಇದೀಗ ಕಾರ್ಯಕರ್ತರ ಕೊಲೆಗಳಾಗುತ್ತಿದ್ರು ಕಠಿಣ ಕ್ರಮದ ಮಾತು ಕೇಳಿ ಕೇಳಿ ರೋಸಿ ಹೋದ ಕಾರ್ಯಕರ್ತರು ಕಟೀಲು ಕಾರನ್ನು ಅಲ್ಲಾಡಿಸಿದ್ದಾರೆ.
ಕಾರ್ಯಕರ್ತರನ್ನು ಬಳಸಿಕೊಳ್ಳುವುದು ಮಾತ್ರ ಇವರಿಗೆ ಗೊತ್ತು ಉಳಿಸಿಕೊಳ್ಳುವುದು ಗೊತ್ತಿಲ್ಲ. ಇಷ್ಟು ದಿನಗಳ ಕಾಲ ಭಾಷಣ ಮೋಡಿಯಲ್ಲಿ ಕಾರ್ಯಕರ್ತರನ್ನು ಮರಳು ಮಾಡಿದ್ರು. ಆದರೆ ಈಗ ಕಾರ್ಯಕರ್ತರೂ ಜಾಗೃತಿಯಾಗಿದ್ದಾರೆ.
Discussion about this post