ಕೇಂದ್ರ ಸಚಿವೆ ಉಮಾಭಾರತಿ ಮತ್ತು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಅನ್ನುವ ಸುದ್ದಿ ಈ ಹಿಂದೆ ಹರಡಿತ್ತು.
ಉಮಾ ಅವರು ಹಿಂದೆ ಭೋಪಾಲ್ನಿಂದ ಗೆದ್ದಿದ್ದರು. ಈ ಬಾರಿ ಅವರು ಸ್ಪರ್ಧಿಸುತ್ತಿಲ್ಲ. ಹೀಗಾಗಿ
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಬಿಜೆಪಿ ಇಲ್ಲಿಂದ ಕಣಕ್ಕಿಳಿಸುತ್ತಿದೆ. ಈ ನಡುವೆ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅನ್ನುವ ಸುದ್ದಿ ಹಬ್ಬಿತ್ತು.
ಈ ಎಲ್ಲಾ ಸುದ್ದಿಗಳಿಗೆ ಬ್ರೇಕ್ ಹಾಕುವ ಸಲುವಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕೇಂದ್ರ ಸಚಿವೆ ಉಮಾಭಾರತಿ ಅವರನ್ನು ಸೋಮವಾರ ಭೇಟಿಯಾದರು. ಶ್ಯಾಮಲಾ ಹಿಲ್ನಲ್ಲಿರುವ ಉಮಾ ಅವರ ನಿವಾಸಕ್ಕೆ ತೆರಳಿದ ಪ್ರಜ್ಞಾ ಒಂದಿಷ್ಟು ಹೊತ್ತು ಅಲ್ಲೇ ಕಳೆದರು. ದೀದಿಮಾ (ಪ್ರಜ್ಞಾ ಅವರನ್ನು ಉಮಾ ಅವರು ಸಂಭೋದಿಸುವ ಹೆಸರು) ಅವರಿಗೆ ತಾವೇ ತುತ್ತು ತಿನ್ನಿಸಿ ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ಸಾರಿದರು.
ಭೇಟಿ ಮುಗಿಸಿ ಅಲ್ಲಿಂದ ಹಿಂದಿರುಗುವಾಗ ಪ್ರಜ್ಞಾ ಕಣ್ಣೀರಿಟ್ಟರು. ಕಾರಿನಲ್ಲಿ ಕುಳಿತಿದ್ದ ಪ್ರಜ್ಞಾ, ಉಮಾಭಾರತಿಯವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ನಂತ್ರ ಉಮಾಭಾರತಿಯವರೇ ಕಣ್ಣೀರು ಒರೆಸಿ,
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಸಂತೈಸಿದರು.
ನಂತ್ರ ಹಣೆಗೆ ಮುತ್ತಿಟ್ಟು, ಕಾಲು ಮುಟ್ಟಿ ನಮಸ್ಕರಿಸಿ ಪ್ರಜ್ಞಾ ಅವರನ್ನು ಉಮಾಭಾರತಿ ಬೀಳ್ಕೊಟ್ಟರು.
ಬಳಿಕ ಮಾತನಾಡಿದ ಉಮಾ ಭಾರತಿ ದೀದಿಮಾ ಅವರು ಅಭ್ಯರ್ಥಿ ಎಂದು ಘೋಷಣೆಯಾದಾಗಲೇ ಅವರು ಗೆದ್ದಾಗಿದೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ನಾನು ಮಾಡುತ್ತಿದ್ದೇನೆ. ದೀದಿಮಾ ಅವರ ಚುನಾವಣಾ ಕೆಲಸಗಳನ್ನು ನೋಡಿಕೊಳ್ಳುವವರು ಕೂಡಾ ಪಕ್ಷದ ಆದೇಶವನ್ನು ಪಾಲಿಸಲಿದ್ದಾರೆ.
ದೀದಿಮಾ ಗೆದ್ದಾಗಿದೆ. ದೀದಿಮಾ ಗೆಲ್ಲುವುದು ಖಚಿತ. ಈಗಾಗಲೇ ಗೆದ್ದಿರುವ ಅವರ ಪರವಾಗಿ ನಾವು ಮತ ಯಾಚನೆ ಮಾಡುತ್ತಿದ್ದೇವೆ ಎಂದರು.
Discussion about this post