Saturday, February 27, 2021

ಶ್ರೀಮಂತ ಸಂಪುಟದಲ್ಲಿ ಬಡ ಸಚಿವ : ಮೋದಿ ಸಂಪುಟದಲ್ಲೇ ಮೋಡಿ ಮಾಡ್ತಾರ ಮತ್ತೊಬ್ಬ ಮೋದಿ

Must read

ಒಡಿಶಾದ ಬಲಾಸೋರ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಾರಂಗಿ ಆವರಿಗೆ ‘ಒಡಿಶಾ ಮೋದಿ’ ಎಂದೇ ಹೆಸರು! ಸರಳತೆಯನ್ನೇ ಬದುಕು ಎಂದುಕೊಂಡ ಇವರೆಗೆ ಇಡೀ ದೇಶವೂ ಕುಟುಂಬವೇ. ಸಂಸ್ಕೃತ ಪಂಡಿತರಾಗಿರುವ ಸಾರಂಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದು, ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿ ಸಂಸದರಾದ ಸಾರಂಗಿ ಬಡ ಸಂಸದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ!

ಒಡಿಶಾದ ಬಾಲಸೋರ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ತನ್ನ ಸರಳ ಜೀವನ ಶೈಲಿಯಿಂದಲೇ ಮನೆಮಾತಾದ ಪ್ರತಾಪ್‌ ಚಂದ್ರ ಸಾರಂಗಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆ ಆಗಿರುವ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಎರಡು ರಾಜ್ಯ ಖಾತೆಗಳು ದೊರೆತಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವ ಹಾಗೂ ಪಶುಸಂಗೋಪನೆ ಮತ್ತು ಹೈನುಗಾರಿಗೆ ಮತ್ತು ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಒಡಿಶಾದಲ್ಲಿ ಇವರು ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾದವರು. ಪ್ರಖರ ವಾಗ್ಮಿ, ಸಂಸ್ಕೃತ ಪಂಡಿತ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತ ಸಾರಂಗಿ ಸೈಕಲ್ನಲ್ಲೇ ಹಳ್ಳಿಗಳಿಗೆ ಸುತ್ತುವ ಸರಳ ಜೀವಿ. ಇವರ ಎದುರು ಬಾಲಸೋರ್‌ನಲ್ಲಿ ಬಿಜೆಡಿಯಿಂದ ಮಾಧ್ಯಮ ದೊರೆ, ಕೋಟ್ಯಧಿಪತಿ ಎಂದೇ ಕರೆಯಲ್ಪಟ್ಟ ರವೀಂದ್ರ ಕುಮಾರ್‌ ಜೇನಾ ವಿರುದ್ಧ 12 ಸಾವಿರ ಮತಗಳಿಂದ ಜೇನಾರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನಿಂದ ಜ್ಯೋತಿ ಪಟ್ನಾಯಕ್‌ ಕೂಡ ಕಣಕ್ಕೆ ಇಳಿದಿದ್ದರು.

ಬಾಲಾಸೋರ್ ನಲ್ಲಿ ಸಾಮಾನ್ಯವಾಗಿ ಯಾವಾಗಲೂ ಬೀಜು ಜನತಾ ದಳ ಅಧಿಕಾರಕ್ಕೆ ಬರುತ್ತಿತ್ತು. ಅದರಲ್ಲಿ ರವೀಂದ್ರ ಕುಮಾರ್‌ ಜೇನಾ ಅವರು ಗೆಲ್ಲುತ್ತಿದ್ದರು. ಆದ್ರೆ ಈ ಬಾರಿ ಇವರ ವಿರೋಧವಾಗಿ ನಿಂತಿದ್ದವರು ಈ ಪ್ರತಾಪ್ ಚಂದ್ರ ಸಾರಂಗಿ ಅವರು. ಇಂತ ಒಬ್ಬ ಶ್ರೀಮಂತ ಅಭ್ಯರ್ಥಿಯನ್ನ, ಒಂದು ರೂಪಾಯಿಯೂ ಇಲ್ಲದೆ, ಸಾವಿರ ಸಾವಿರ ಮತಗಳ ಅಂತರದಿಂದ ಸೋಲಿಸಿ, ದಾಖಲೆ ಸೃಷ್ಟಿಸಿದ್ದಾರೆ. ಹೌದು. ಇವರನ್ನ ಕಣಕ್ಕೆ ಇಳಿಸಿದ್ದು, ಸ್ವತಃ ಮೋದಿಯವರೇ. ಇವರು ಮಾಡುವ ಜನಸೇವೆಯನ್ನ ನೋಡಿದ ಮೋದಿಯವರು, ಇವರನ್ನ ಕಣಕ್ಕಿಳಿಸಿ ಗೆಲುವಿನ ನಗೆ ಬೀರಿದ್ದಾರೆ.

ಗುಡಿಸಲಿನಲ್ಲಿ ವಾಸಿಸುವ ಸಾರಂಗಿ ಮದುವೆಯಾಗಿಲ್ಲ. ಕಳೆದ ವರ್ಷ ತಮ್ಮ ತಾಯಿಯನ್ನು ಕಳೆದುಕೊಂಡ ಅವರು ತಮ್ಮ ಇಡೀ ಬದುಕನ್ನೂ ಸಮಾಜ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಅವರು ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆಯೇ ಅವರ ಸರಳ ಬದುಕನ್ನು ತೋರಿಸುವ ಅವರ ಹಲವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಚುನಾವಣೆಗಾಗಿ ಹಣವನ್ನು ಸುರಿಯದೆ, ಕಾಲ್ನಡಿಗೆಯಲ್ಲೇ ಪ್ರಚಾರ ಮಾಡಿದ ಸಾರಂಗಿ, ಹಣ ಮತ್ತು ಅದ್ಧೂರಿ ಪ್ರಚಾರವೇ ಚುನಾವಣೆಯ ಗೆಲುವಿಗೆ ಮಾನದಂಡವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ನಾನಾ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಕಷ್ಟ ಅರಿತಿದ್ದಾರೆ. ಅವರ ನೈಜ ಕಾಳಜಿಗೆ ಮತದಾರ ಒಲಿದು, ಅವರನ್ನು ಸಂಸತ್ತಿಗೆ ಕಳಿಸಿದ್ದಾನೆ.

ಸಂಸ್ಕೃತ ಪಂಡಿತರಾಗಿರುವ ಸಾರಂಗಿ, ಸಂಸ್ಕೃತ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡಬಲ್ಲ ಏಕೈಕ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೊದಿ ಅವರೂ ಸಾರಂಗಿ ಅವರ ಮೇಲೆ ವಿಶೇಷ ಅಕ್ಕರೆ ಹೊಂದಿದ್ದು, ಒಡಿಶಾಕ್ಕೆ ಬಂದರೆ ಸಾರಂಗಿ ಅವರನ್ನು ಭೇಟಿ ಮಾಡದೆ ಇರುವುದಿಲ್ಲ. ನಾಮಪತ್ರದ ಸಮಯದಲ್ಲಿ ಅವರು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ ಪ್ರಜಾರ ಅವರ ಒಟ್ಟು ಆಸ್ತಿ 13,46,236 ರೂ. ಒಟ್ಟು ಏಳು ಕ್ರಿಮಿನಲ್ ಕೇಸ್ ಗಳು ಅವರ ಮೇಲಿದೆ.

ಬಾಲಸೋರ್ ಕ್ಷೇತ್ರದಲ್ಲಿ 1998, 1999 ಮತ್ತು 2004 ಈ ಮೂರು ಅವಧಿಯನ್ನು ಬಿಟ್ಟರೆ ಬಿಜೆಪಿ ಮತ್ತೆಂದೂ ಗೆಲುವು ಸಾಧಿಸಿರಲಿಲ್ಲ. 2014 ರಲ್ಲಿ ರಬೀಂದ್ರ ಜೈನ್ ಅವರ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಸಾರಂಗಿ ಈ ಬಾರಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಅವರು 2004 ಮತ್ತು 2009 ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

- Advertisement -
- Advertisement -

Latest article