13 DYSP ಹಾಗೂ 108 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ (police transfer) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು : ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ , ರಾಜ್ಯ ನಾಯಕರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣಾ ವರ್ಷದಲ್ಲಿ ಕಾನೂನು ಸುವ್ಯವಸ್ಕೆ ಕೈ ಕೊಟ್ರೆ ಆಗಬಹುದಾದ ಅನಾಹುತಗಳನ್ನು ವಿವರಿಸಿದ್ದರು. ಅದರಲ್ಲೂ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ, ನಿಮ್ಮ ಕೈಯಿಂದ ಆಗುವುದಾದ್ರೆ ಹೇಳಿ, ಇಲ್ಲವಾದ್ರೆ ನಾನು ಬೇರೆ ಮಾರ್ಗ ಕಂಡುಕೊಳ್ಳುತ್ತೇನೆ ಅಂದಿದ್ದರು. (police transfer)
ಇದರ ಬೆನ್ನಲ್ಲೇ ಇದೀಗ ಪೊಲೀಸ್ ಇಲಾಖೆಗೆ ಗೃಹ ಖಾತೆ ಮೇಜರ್ ಸರ್ಜರಿ ( police transfer) ಮಾಡಿದೆ. 13 DYSP ಹಾಗೂ 108 ಪೊಲೀಸ್ ಇನ್ಸ್ ಪೆಕ್ಟರ್ ಆದೇಶದ ಜೊತೆಗೆ ವಲಯವಾರು ಸಬ್ ಇನ್ಸ್ ಪೆಕ್ಟರ್ ಗಳನ್ನೂ ಕೂಡಾ ವರ್ಗಾಯಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಹಳಿ ತಪ್ಪಿರುವ ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ : Prakruti Mishra – babushaan mohanty : ನಟಿ ಜೊತೆ ವಿವಾಹಿತನ ನಟನ ಪ್ರೇಮ ಪ್ರಸಂಗ : ನಡು ರಸ್ತೆಯಲ್ಲೇ ಚಳಿ ಬಿಡಿಸಿದ ಪತ್ನಿ
ಅದ್ಯಾವ ವರ್ಗಾವಣೆಗಳು ನಡೆದರೂ ರಾಜ್ಯದಲ್ಲಿ ಮಾದಕ ವಸ್ತು ದಂಧೆ ಹಾಗೂ ಮಸಾಜ್ ಪಾರ್ಲರ್ ದಂಧೆಗೆ ಬ್ರೇಕ್ ಹಾಕದಿದ್ರೆ ಯಾವ ಪ್ರಯೋಜನವೂ ಇಲ್ಲ.
ಇನ್ನು ವರ್ಗಾವಣೆಗೊಂಡ ಡಿವೈಎಸ್ಪಿಗಳ ಹೆಸರು ಹೀಗಿದೆ. ಎಚ್.ಆರ್.ಅನಿಲ್ ಕುಮಾರ್- ಚಿತ್ರದುರ್ಗ, ಎ.ವಿ.ಲಕ್ಷ್ಮೀನಾರಾಯಣ್ – ಆನೇಕಲ್, ಆರ್. ಮಂಜುನಾಥ್- ಯಲಹಂಕ, ಎನ್.ರೀನಾ ಸುವರ್ಣ- ಸಿಸಿಬಿ ಬೆಂಗಳೂರು, ಎಸ್.ಟಿ. ಚಂದ್ರಶೇಖರ್- ಇಲಾಖಾ ವಿಚಾರಣೆ ಬೆಂಗಳೂರು, ಸಿ.ಆರ್.ರವಿಶಂಕರ್- ಗುಪ್ತದಳ, ಬಿ. ಜಗನ್ನಾಥ್ ರೈ- ಗುಪ್ತದಳ, ಎಸ್. ಸತ್ಯವತಿ- ಗುಪ್ತದಳ, ವಿಜಯ್ ಬಿರಾದಾರ್- ಗುಪ್ತದಳ, ಎನ್. ಪುಷ್ಪಲತಾ- ಲೋಕಾಯುಕ್ತ, ಎಂ. ಮಲ್ಲೇಶಯ್ಯ- ಲೋಕಾಯುಕ್ತ, ಎಂ.ಇ. ಮನೋಜ್ ಕುಮಾರ್- ಸಿಐಡಿ ಮತ್ತು ಪರಮೇಶ್ವರ್-ಲೋಕಾಯುಕ್ತ
ವರ್ಗಾವಣೆಗೊಂ ಇನ್ಸ್ ಪೆಕ್ಟರ್ ಗಳ ಪಟ್ಟಿ ಹೀಗಿದೆ.
ಇನ್ನು ಪುತ್ತೂರು ಮತ್ತು ಕಡಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿ 6 ಪೊಲೀಸರ್ ಅಧಿಕಾರಿಗಳನ್ನು ವರ್ಗಾಯಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಆದೇಶಿಸಿದ್ದಾರೆ.
ಪುತ್ತೂರು ಠಾಣೆಯ ಕಾನೂನು ಸುವ್ಯವಸ್ಥೆ ಸಬ್ ಇನ್ಸ್ ಪೆಕ್ಟರ್ ರಾಜೇಶ್ ಕೆವಿ ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡಿದ್ದು, ಕಡಬ ಠಾಣೆಯ ತನಿಖಾ ವಿಭಾಗದ ಸಬ್ ಇನ್ಸ್ ಪೆಕ್ಟರ್ ಶ್ರೀಕಾಂತ್ ರಾಠೋಡ್ ಅವರನ್ನು ರಾಜೇಶ್ ಕೆವಿ ಅವರಿಂದ ತೆರವಾದ ಸ್ಥಾನಕ್ಕೆ ತರಲಾಗಿದೆ.
Discussion about this post