ಸೊಂಟ ಬಳುಕಿಸಿದ್ದೇನು, ಡೊಳ್ಳು ಹೊಟ್ಟೆ ಕುಣಿಸಿದ್ದೇನು… (Police Ramp Walk) ಖಾಕಿ ತೊಟ್ಟು Ramp walk ಮಾಡಿದ ಕರ್ಮಕ್ಕೆ ವರ್ಗಾವಣೆ ಭಾಗ್ಯ ಸಿಕ್ಕಿದೆ
ಚೆನೈ : ಪೊಲೀಸರು ಅಂದ್ರೆ ಸಮಾಜದಲ್ಲೊಂದು ಘನತೆ ಗೌರವವಿದೆ. ಅದನ್ನು ಅನೇಕ ಮಂದಿ ಮರೆತಿದ್ದಾರೆ. ಲಂಚ ಕೊಟ್ಟು ಹುದ್ದೆಗೆ ಬಂದ ಮಂದಿಯಿಂದ ಅದನ್ನು ನಿರೀಕ್ಷಿಸಲು ಕೂಡಾ ಸಾಧ್ಯವಿಲ್ಲ. ಹೀಗೆ ಪೊಲೀಸ್ ಸಮವಸ್ತ್ರಕ್ಕೆ ಅವಮಾನ ಮಾಡಿದ 5 ಮಂದಿ ಪೊಲೀಸ್ ಸಿಬ್ಬಂದಿ (Police Ramp Walk )ಇದೀಗ ವರ್ಗಾವಣೆಯಾದ ಸುದ್ದಿ ತಮಿಳುನಾಡಿನಿಂದ ಬಂದಿದೆ.
ಕಳೆದ ಭಾನುವಾರ ಮೈಲಾಡುತುರೈ ಜಿಲ್ಲೆಯ ಸೆಂಬಾನಾರ್ಕೋಯಿಲ್ ನಲ್ಲಿ ಖಾಸಗಿ ಸೌಂದರ್ಯ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ನಟಿ ಯಶಿಕಾ ಆನಂದ್ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ನಡುವೆ ಭದ್ರತೆ ಸಲುವಾಗಿ ಬಂದಿದ್ದ ಪೊಲೀಸರ ಬಳಿ Ramp walk ಮಾಡುವಂತೆ ಆಯೋಜಕರು ವಿನಂತಿಸಿದ್ದಾರೆ.
More Read : BIGG BOSS KANNADA : ಬಿಗ್ ಬಾಸ್ ಮನೆ ಪ್ರವೇಶಿಸಿದ ಪತ್ರಕರ್ತ ಸೋಮಣ್ಣ ಮಾಚಿಮಾಡ
ನಾವು ಸಮವಸ್ತ್ರ ತೊಟ್ಟಿದ್ದೇವೆ ಅನ್ನುವುದನ್ನು ಮರೆತ ಸೆಂಬಾನಾರ್ಕೋಯಿಲ್ ಠಾಣೆಯ SSI ಸುಬ್ರಮಣ್ಯನ್, ಮಹಿಳಾ ಪೊಲೀಸರಾದ ರೇಣುಕಾ, ಅಶ್ವಿನಿ, ನಿತ್ಯಾಶೀಲ ಮತ್ತು ಶ್ರೀನಿವಾಸನ್ ಸಿಕ್ಕಿದ್ದೇ ಛಾನ್ಸು ಅಂತಾ ವೇದಿಕೆ ಹತ್ತಿದ್ದಾರೆ. SSI ಸುಬ್ರಮಣ್ಯನ್ ಅಂತೂ ತಮ್ಮ ಡೊಳ್ಳು ಹೊಟ್ಟೆಯನ್ನೇ ಪ್ರದರ್ಶನಿಕ್ಕಿಟ್ಟಿದ್ದರು.
ಪೊಲೀಸರ ಈ ಮಾರ್ಜಲ ನಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನೂ ಬೇರೆ ಬೇರೆ ಠಾಣೆಗೆ ವರ್ಗಾಯಿಸಿದ್ದಾರೆ.
Discussion about this post