ನ್ಯೂಯಾರ್ಕ್ : ಸುದ್ದಿ ಮನೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳು ನಡೆಯುತ್ತಿರುತ್ತದೆ. ಆದರೆ ಟಿವಿ ವಾಹಿನಿಗಳ ಸ್ಟುಡಿಯೋದಲ್ಲಿ ಒಂದಿಷ್ಟು ಹೆಚ್ಚು ಎಡವಟ್ಟುಗಳು ನಡೆಯುತ್ತಿರುತ್ತದೆ.
ಆದರೆ ಒಂದಿಷ್ಟು ಆತಂಕಕಾರಿ ಅನ್ನಿಸುವ ಎಡವಟ್ಟು ಅಮೇರಿಕಾದಲ್ಲಿ ನಡೆದಿದೆ. ಅಮೆರಿಕಾದ KREM ನ್ಯೂಸ್ ಚಾನೆಲ್ ನಲ್ಲಿ ಮಹಿಳಾ ವಾರ್ತಾವಾಚಕಿ ಹವಮಾನ ಸುದ್ದಿಗಳನ್ನು ನೀಡುತ್ತಿದ್ದ ವೇಳೆ ಪರದೆಯ ಮೇಲೆ ಮಳೆ ಗಾಳಿ ಸಿಡಿಲು ಮಿಂಚಿನ ದೃಶ್ಯದ ಬದಲು ಅಶ್ಲೀಲ ವೀಡಿಯೋ ಪ್ರಸಾರವಾಗಿದೆ.

ನಿರೂಪಕಿಯ ಹಿಂದಿನ ಪರದೆಯಲ್ಲಿ ಇದು ಕಾಣಿಸಿಕೊಂಡ ಕಾರಣ ನಿರೂಪಕಿಗೆ ಇದರ ಅರಿವು ಇರಲಿಲ್ಲ, ಅವರು ತಮ್ಮ ಪಾಡಿಗೆ ಮಳೆ ಗಾಳಿ ಸುದ್ದಿ ಹೇಳ್ತಾನೆ ಸಾಗಿದ್ರು. ಒಂದಿಷ್ಟು ನಿಮಿಷಗಳ ಬಳಿಕ ವೀಡಿಯೋವನ್ನು ತಕ್ಷಣ ನಿಲ್ಲಿಸಲಾಗಿದೆ. ಅಷ್ಟು ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ವಾಹಿನಿ ತನ್ನ ಕಡೆಯಿಂದ ಆಗಿರುವ ಅಚಾತುರ್ಯಕ್ಕೆ ಕ್ಷಮೆ ಕೇಳಿದೆ. ಹಾಗಿದ್ದರೂ ವಾಹಿನಿ ವಿರುದ್ಧ ಇದೀಗ ಪೋರ್ನ್ ವಿಡಿಯೋ ಪ್ರಸಾರ ಮಾಡಿದ ಕಾರಣ ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ
Discussion about this post