ನವದೆಹಲಿ : ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಚೀನಾ ಹಾಗೂ ಪಾಕಿಸ್ತಾನ ಇದೀಗ ಸಿಕ್ಕಾಪಟ್ಟೆ ಆತ್ಮೀಯ ರಾಷ್ಟ್ರಗಳಾಗುತ್ತಿವೆ. ಭಾರತದ ವಿರುದ್ಧ ಸಮರ ಸಾರುವ ನಿಟ್ಟಿನಲ್ಲಿ ಚೀನಾದೊಂದಿಗೆ ಕೈ ಜೋಡಿಸಿರುವ ಪಾಕಿಸ್ತಾನ ಮಾಡಬಾರದ ಕೃತ್ಯಗಳನ್ನು ಮಾಡುತ್ತಿದೆ.

ಈ ನಡುವೆ ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ಧನೌಕೆಯೊಂದನ್ನು ಉಡುಗೊರೆಯಾಗಿರುವ ಕೊಟ್ಟಿರುವ ಚೀನಾ, ಪಾಕಿಸ್ತಾನದ ಸೇನೆಯನ್ನು ಬಲಪಡಿಸಲು ಮುಂದಾಗಿದೆ. ಇದೀಗ ನೌಕೆಗೆ ಪಿಎನ್ಎಸ್ ತುಘ್ರಿಲ್ ( PNS tughril) ಎಂದು ನಾಮಕರಣ ಮಾಡಲಾಗಿದ್ದು, ಶತ್ರುಗಳ ರಾಡಾರ್ ಕಣ್ಣು ತಪ್ಪಿಸುವ ಸಾಮರ್ಥ್ಯ ಹೊಂದಿದೆ.

ಪಿಎನ್ಎಸ್ ತುಘ್ರಿಲ್ ( PNS tughril) ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು ನೆಲದಿಂದ ನೆಲಕ್ಕೆ, ನೆಲದಿಂದ ಆಗಸಕ್ಕೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಮಾಹಿತಿಗಳ ಪ್ರಕಾರ 2017ರಲ್ಲಿ ನಾಲ್ಕು ಯುದ್ಧ ನೌಕೆಗಳನ್ನು ಪಡೆಯುವ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ವ್ಯವಹಾರಕ್ಕೆ ಪಾಕ್ ಕೊಡುವ ಹಣವೆಷ್ಟು ಅನ್ನುವ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಇದು ಗಿಫ್ಟ್ ಎಂದೇ ಹೇಳಲಾಗಿದೆ.

Discussion about this post