ನವದೆಹಲಿ : ಆ.10 ರಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಒಂದು ಹೇಳಿಕೆ ಇದೀಗ ಸೋಮಾರಿ ಸಂಸದರಲ್ಲಿ ನಡುಕ ಹುಟ್ಟಿಸಿದೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗೋದಿಲ್ಲ ಅನ್ನುವ ಸೂಚನೆಯೂ ಸಿಕ್ಕಿದೆ.
ಆಗಿದ್ದೇನು…?
ಆಗಸ್ಟ್ 9 ರಂದು ರಾಜ್ಯಸಭೆಯಲ್ಲಿ ವಿಪಕ್ಷಗಳು statutory resolution ನಿರ್ಣಯ ಮಂಡಿಸಿತ್ತು. ನಿರ್ಣಯದ ಪ್ರಕಾರ ನ್ಯಾಯಮಂಡಳಿ ಸುಧಾರಣಾ ವಿಧೇಯಕವನ್ನು ಆಯ್ಕೆ ಸಮಿತಿಗೆ ಕಳಿಸುವುದಕ್ಕೆ ಆಗ್ರಹಿಸಲಾಗಿತ್ತು. ಆದರೆ ವಿಪಕ್ಷಗಳ ನಿರ್ಣಯಕ್ಕೆ ಸೋಲಾಗಿತ್ತು. ಆದರೆ ನಿರ್ಣಯ ಮಂಡನೆ ವೇಳೆ ಅನೇಕ ಸಂಸದರು ಗೈರು ಹಾಜರಾಗಿದ್ದರು.
ಇದರಿಂದ ಗರಂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಈ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸೂಚನೆ ನೀಡಿರುವ ಪ್ರಧಾನಿಗಳು ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ.
Discussion about this post