ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಬಂದ ಉಡುಗೊರೆ ಹಾಗೂ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ಶುಕ್ರವಾರದಿಂದ ಪ್ರಾರಂಭವಾಗಿದ್ದು. ಈ ಹಿಂದಿಗಿಂತ ಈ ಬಾರಿ ಉತ್ತಮ ಮೊತ್ತಕ್ಕೆ ಬಿಡ್ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಅದರಲ್ಲೂ ಒಲಿಂಪಿಕ್ಸ್ ತಾರೆಯರು ನೀಡಿದ ಉಡುಗೊರೆಗಳನ್ನು ಖರೀದಿಸಲು ಜನ ನಾ ಮುಂದು ತಾ ಮುಂದು ಎಂದು ಬಂದಿದ್ದಾರೆ.
ಪ್ರಧಾನಿಯವರಿಗೆ ಸಿಕ್ಕಿರುವ ಒಟ್ಟು 13 ಸಾವಿರಕ್ಕೂ ಹೆಚ್ಚು ವಸ್ತುಗಳ ಹರಾಜು ಪ್ರಕ್ರಿಯೆ ಸಪ್ಟಂಬರ್ 17ರ ಶುಕ್ರವಾರದಿಂದ ಪ್ರಾರಂಭಗೊಂಡಿದ್ದು, ಆಗಸ್ಟ್ 7ರ ತನಕ ಹರಾಜು ಪ್ರಕ್ರಿಯೆ ನಡೆಯಲಿದೆ. ಬಿಡ್ ಪ್ರಾರಂಭಗೊಂಡ ಮೊದಲ ದಿನ ಶಿಲ್ಪಗಳು, ವರ್ಣಚಿತ್ರ, ಅಂಗವಸ್ತ್ರ ಮೊದಲ ದಿನವೇ ಹರಾಜುಗೊಂಡಿದೆ.
ಈ ನಡುವೆ ಒಲಿಂಪಿಕ್ಸ್ ಮುಕ್ತಾಯದ ಬಳಿಕ ಕ್ರೀಡಾಪಟುಗಳು ಮೋದಿಗೆ ನೀಡಿದ ಉಡುಗೊರೆಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಅದು ಕೋಟಿ ಕೋಟಿ ಮೊತ್ತಕ್ಕೆ ಅನ್ನುವುದೇ ವಿಶೇಷ. ಈ ಹಿಂದೆ 13 ಲಕ್ಷ ರೂಪಾಯಿ ಅಶೋಕ ಸ್ತಂಭದ ಪ್ರತಿಕೃತಿ 13 ಲಕ್ಷಕ್ಕೆ ಹರಾಜುಗೊಂಡಿತ್ತು. ಅದೇ ಈವರೆಗಿನ ಗರಿಷ್ಟ ಮೊತ್ತವಾಗಿದೆ.
- ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಕೊಟ್ಟ ಜಾವೆಲಿನ್ – 2 ಕೋಟಿ ರೂಪಾಯಿ
- ಬಾಕ್ಸರ್ ಲವ್ಲೀನಾ ನೀಡಿದ ಬಾಕ್ಸಿಂಗ್ ಗ್ಲೋವ್ಸ್ -1.92 ಕೋಟಿ ರೂಪಾಯಿ
- ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್ ನೀಡಿದ ಜಾವೆಲಿನ್ – 1.08 ಕೋಟಿ ರೂಪಾಯಿ
- ಮಹಿಳಾ ಹಾಕಿ ತಂಡದ ಸದಸ್ಯರ ಸಹಿ ಇರುವ ಬ್ಯಾಟ್ – 1 ಕೋಟಿ ರೂಪಾಯಿ
- ಪಿವಿ ಸಿಂಧು ನೀಡಿದ ಬ್ಯಾಡ್ಮಿಂಟನ್ ರಾಕೆಟ್ ಹಾಗೂ ಬ್ಯಾಗ್ – 90.02 ಲಕ್ಷ ರೂಪಾಯಿ
- 500 ರೂಪಾಯಿ ಮುಖ ಬೆಲೆಯ ಅಂಗವಸ್ತ್ರದ ಬಿಡ್ ಒಂದು ಕೋಟಿಗೆ ತಲುಪಿದೆ.
ಹರಾಜಿನಿಂದ ಬಂದ ಹಣವನ್ನು ಪ್ರಧಾನಿ ನರೇಂದ್ರ ಮೋದಿ ನಮಾಮಿ ಗಂಗೆ ಹೆಸರಿನ ಗಂಗಾ ಸ್ವಚ್ಛ ಕಾರ್ಯಕ್ಕೆ ಬಳಸಲಿದ್ದಾರೆ.
Discussion about this post