ನವದೆಹಲಿ : ದೇಶಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಸಂಸದರ ಬೈಠಕ್ ನಲ್ಲಿ ಈ ಟಾಸ್ಕ್ ನೀಡಲಾಗಿದ್ದು, ಭಾರತಕ್ಕೆ ಸ್ವತಂತ್ರ ಸಿಕ್ಕಿ 100 ವರ್ಷವಾಗುವ ಹೊತ್ತಿಗೆ ಭಾರತ ಹೇಗೆ ಅಭಿವೃದ್ಧಿ ಹೊಂದಿರಬೇಕು ಅನ್ನುವುದರ ಮಾಹಿತಿ ಕಲೆ ಹಾಕುವಂತೆ ಪ್ರಧಾನಿ ಸೂಚಿಸಿದ್ದಾರೆ.
ಪ್ರಧಾನಿಯವರ ಯೋಜನೆ ಪ್ರಕಾರ, ಪ್ರತಿ ವಿಧಾನಸಭಾ ಕ್ಷೇತ್ರದ ನಾಲ್ಕು ಕಾರ್ಯಕರ್ತರನ್ನು ಆಯ್ಕೆ ಮಾಡಿ ಇಬ್ಬರಿರುವ ಎರಡು ತಂಡಗಳನ್ನು ರಚಿಸಬೇಕು. ಈ ಕಾರ್ಯಕರ್ತರು 75 ಗ್ರಾಮಗಳ ಪ್ರವಾಸ ಮಾಡಿ, ಡಿಜಿಟಲ್ ಸಾಕ್ಷರತೆಯಲ್ಲಿ ದೇಶ ಎಲ್ಲಿಗೆ ತಲುಪಿದೆ. ಸ್ವತಂತ್ರ ಸಿಕ್ಕಿ 100 ವರ್ಷವಾಗುವ ಹೊತ್ತಿಗೆ ಎಲ್ಲಿಗೆ ತಲುಪಬೇಕು ಅನ್ನುವ ಮಾಹಿತಿಯನ್ನು ಕಾರ್ಯಕರ್ತರು ಕೊಡಬೇಕು.
ಈ ಕಾರ್ಯಕ್ರಮ ಜನಾಂದೋಲನವಾಗಬೇಕು ಅಂದಿರುವ ಪ್ರಧಾನಿ 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 75 ಗ್ರಾಮಗಳಿಗೆ ಭೇಟಿ ನೀಡಿ 75 ಗಂಟೆ ಅವರೊಂದಿಗೆ ಕಳೆಯಿರಿ ಎಂದು ಪ್ರಧಾನಿಗಳು ಹೇಳಿದ್ದಾರೆ. ಜೊತೆಗೆ ಇದೊಂದು ಸರ್ಕಾರಿ ಕಾರ್ಯಕ್ರಮವಾಗಬಾರದು ಎಂದು ಸಂಸದರಿಗೆ ಪ್ರಧಾನಿ ಸೂಚಿಸಿದ್ದಾರೆ.
ಪ್ರಧಾನಿಗಳ ಕನಸಿನ ಯೋಜನೆ ಚೆನ್ನಾಗಿದೆ. ಆದರೆ ನಿಜಕ್ಕೂ ಇದನ್ನು ಜಾರಿ ಮಾಡುವ ಸಂಸದರು ಎಷ್ಟು ಮಂದಿ. ಸಂಸದರ ಆದರ್ಶ ಗ್ರಾಮ ಅನ್ನುವ ಯೋಜನೆಯೊಂದನ್ನು ಇನ್ನೂ ಮುಗಿಸಲಾಗದ ಸಂಸದರು ನಮ್ಮಲ್ಲಿದ್ದಾರೆ. ಆದರ್ಶನ ಗ್ರಾಮಕ್ಕೆ ಅನೇಕ ಸಂಸದರು ಹೆಸರು ಫೈನಲ್ ಮಾಡಿದ್ದು ಬಿಟ್ರೆ ಅಲ್ಲಿ ಆದರ್ಶ ಅನ್ನಿಸುವ ಕೆಲಸಗಳು ನಡೆದಿಲ್ಲ. ಇನ್ನು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆಗಳನ್ನು ಅದೆಷ್ಟು ಸಂಸದರು ಅರ್ಥ ಮಾಡಿಕೊಂಡ ಜನರ ಗೊಂದಲ ನಿವಾರಿಸಿದ್ದಾರೆ. ಬಹುತೇಕ ಸಂಸದರಿಗೆ ಈ ಕಾಯ್ದೆ ಅಳ ಅಗಲವೇ ಗೊತ್ತಿಲ್ಲ. ಗೊತ್ತಿರುತ್ತಿದ್ರೆ ಕಾರ್ಯಕರ್ತರ ಸಭೆ ಕರೆದು ಅವರಲ್ಲಿ ಜಾಗೃತಿ ಮೂಡಿಸಿ, ಜನರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಿಸುತ್ತಿರಲಿಲ್ಲವೇ.
Discussion about this post