ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಥಿಗಳನ್ನಾಗಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ.
ಆ.15 ರಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಕ್ರೀಡಾಪಟುಗಳನ್ನು ಭೇಟಿ ಮಾಡಿ ಮಾತುಕತೆಯಾಡಲಿದ್ದಾರೆ.
ಆಗಸ್ಟ್ 03 ರಂದು ಭಾರತ ಪುರುಷರ ಹಾಕಿ ತಂಡ ಬೆಲ್ಜಿಯಂ ವಿರುದ್ಧ ಒಲಂಪಿಕ್ಸ್ ನಲ್ಲಿ ವಿರೋಚಿತ ಸೋಲು ಕಂಡಿತ್ತು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸೋಲು-ಗೆಲುವು ಜೀವನದ ಭಾಗ ಹಾಗೂ ಆಟಗಾರರ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ ಅಂದಿದ್ದರು.
Discussion about this post