ನವದೆಹಲಿ : ಪುಲ್ವಾಮಾ ಯೋಧರ ಹತ್ಯೆಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಬಾಲಾಕೋಟ್ ಪ್ರದೇಶದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ( surgical strike ) ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಾಯುಪಡೆಯ ಸಾಹಸಕ್ಕೆ ಸಾಕ್ಷಿ ಕೇಳಿ ನಮ್ಮ ಸೈನ್ಯವನ್ನು ಅವಮಾನಿಸಿದ್ದರು.
ಇದೀಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ ವಾಯುದಾಳಿ ನಡೆಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಮಿಡಲ್ ಈಸ್ಟ್ ಅನ್ನೋ ಚಾನೆಲ್ ಗೆ ಸಂದರ್ಶನ ಕೊಟ್ಟಿರುವ ಅವರು ಕಾಶ್ಮೀರದಲ್ಲಿ ಚಿಕ್ಕದೊಂದು ತಿಕ್ಕಾಟವಾಗಿತ್ತು. ಆತ್ಮಾಹುತಿ ದಾಳಿಗೆ ಭಾರತದ ಯೋಧರು ಬಲಿಯಾಗಿದ್ದರು. ಈ ಘಟನೆಗೆ ಭಾರತ ನಮ್ಮನ್ನೇ ಹೊಣೆ ಮಾಡಿತ್ತು. ಆದರೆ ನಾವು ದಾಳಿಕೋರರ ಬಗ್ಗೆ ಸಾಕ್ಷಿ ಕೊಡಿ ಅವರನ್ನು ಶಿಕ್ಷಿಸುತ್ತೇವೆ ಅಥವಾ ನಿಮಗೆ ಹಸ್ತಾಂತರಿಸುತ್ತೇವೆ ಅಂದಿದ್ದೇವು, ಆದರೆ ಸಾಕ್ಷಿ ನೀಡದ ಅವರು ನಮ್ಮ ಮೇಲೆ ಬಾಂಬ್ ದಾಳಿ ನಡೆಸಿದರು ಅಂದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಹಿನ್ನಲೆ
ಕಾಶ್ಮೀರದ ಪುಲ್ವಾಮಾದಲ್ಲಿ ಅಟ್ಟಹಾಸಗೈದಿದ್ದ ಪಾಕ್ ಉಗ್ರರು 2019ರ ಫೆಬ್ರವರಿ 14 ರಂದು 40 ಯೋಧರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ 2019ರ ಫೆಬ್ರವರಿ 26 ರಂದು ಭಾರತದ ವಾಯುಪಡೆ ಪಾಕಿಸ್ತಾನದ ಉಗ್ರ ನೆಲೆಯಾದ ಬಾಲಾಕೋಟ್ ಮೇಲೆ ಬಾಂಬ್ ದಾಳಿ ನಡೆಸಿ ಬಂದಿತ್ತು.
ಭಾರತೀಯ ವಿಮಾನಗಳು ಹಿಂತಿರುಗುವ ಸಂದರ್ಭದಲ್ಲಿ ಭಾರತದ ಮಿಗ್ ವಿಮಾನವನ್ನು ಪಾಕ್ ಹೊಡೆದುರುಳಿಸಿತ್ತು. ಅದರಲ್ಲಿದ್ದ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್ ಗೆ ಸೆರೆ ಸಿಕ್ಕಿದ್ದರು. ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ 3 ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಿತ್ತು.
Discussion about this post