ನವದೆಹಲಿ : ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗುತ್ತಿದೆ ಅನ್ನುವ ಹೊತ್ತಿಗೆ, ರಕ್ತಪಿಪಾಸುಗಳ ಅಟ್ಟಹಾಸ ಶುರುವಾಗಿದೆ.ಆರು ದಿನಗಳಲ್ಲಿ ಸರಣಿ ದಾಳಿ ನಡೆಸಿರುವ ಉಗ್ರಗಾಮಿಗಳು ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದವರು ಸೇರಿ 7 ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಲ್ಲಿ ಆತಂಕ ಶುರುವಾಗಿದ್ದು, ಮತ್ತೆ ವಲಸೆಗೆ ಮುಂದಾಗಿದ್ದರು.
ಇದೀಗ ಉಗ್ರರ ವಿರುದ್ಧ ಪ್ರತೀಕಾರದ ಶಪಥಗೈದಿರುವ ಸೇನೆ, ಕಾರ್ಯಾಚರಣೆ ತೀವ್ರಗೊಳಿಸಿದೆ. ಈ ಹತ್ಯೆಯ ಹಿಂದೆ ಹೈಬ್ರಿಡ್ ಉಗ್ರರಿರುವುದನ್ನು ಪತ್ತೆ ಹಚ್ಚಿದೆ. NIA, CRPF, ಕಾಶ್ಮೀರ ಪೊಲೀಸರು ಹಾಗೂ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದ್ದು ಹಿಂದೂಗಳ ಹತ್ಯೆಗೆ ಸಂಬಂಧಿಸಿದಂತೆ 700 ಮಂದಿ ಭಯೋತ್ಪಾದಕ ಸಹಾನೂಭೂತಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ. ಜೊತೆಗೆ ಏಳು ಮಂದಿ ಉಗ್ರರ ರುಂಡ ಚೆಂಡಾಡಿದೆ. ಇನ್ನು ಬಂಧಿತ 700 ಜನರ ಪೈಕಿ 500 ಮಂದಿ ನಿಷೇಧಿತ ಉಗ್ರ ಸಂಘಟನೆ ಮತ್ತು ಧಾರ್ಮಿಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಬಂಧಿತರ ಪೈಕಿ ಈ ಹಿಂದೆ ಕಲ್ಲು ತೂರಾಟದಲ್ಲಿ ತೊಡಗುತ್ತಿದ್ದವರು ಕೂಡಾ ಸೇರಿದ್ದಾರೆ.
ಭಯೋತ್ಪಾದಕರು ಇಲ್ಲಿ ನೇರವಾಗಿ ಕಾರ್ಯಾಚರಣೆ ನಡೆಸುವುದಿಲ್ಲ ಬದಲಾಗಿ ಸ್ಥಳೀಯ ಯುವಕರನ್ನು ದಾಳಿಗೆ ಬಳಸಿಕೊಳ್ಳುತ್ತಾರೆ ಯಾರನ್ನು ಗುರಿ ಮಾಡಿ ದಾಳಿ ನಡೆಸಬೇಕು ಅನ್ನುವ ಸೂಚನೆಯನ್ನು ಯುವಕರಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ದಾಳಿ ನಡೆಸಿದ ಕೂಡಲೇ ಶಸ್ತ್ರಾಸ್ತ್ರಗಳನ್ನು ಅವರಿಂದ ವಾಪಸ್ ಪಡೆದುಕೊಳ್ಳಲಾಗುತ್ತದೆ. ಹೀಗಾಗಿ ದಾಳಿಕೋರರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ.
ಈ ನಡುವೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದ್ದು, ಬಂಡಿಪೊರ ಹಾಗೂ ಅನಂತ್ ನಾಗ್ ಜಿಲ್ಲೆಗಳಲ್ಲಿ ನಸುಕಿನ ಜಾವ ಕಾರ್ಯಾಚರಣೆ ನಡೆಸಿದ ಸೇನಾಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದೆ. ಬಂಡಿಪೊರಾದಲ್ಲಿ ಹತ್ಯೆಯಾದ ಭಯೋತ್ಪಾದಕನನ್ನು ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, LETTRF ನಿಷೇಧಿತ ಸಂಘಟನೆಗೆ ಸೇರಿದವನಾಗಿದ್ದಾನೆ.
Discussion about this post