ಇರಾನ್ ನಲ್ಲಿ ಹಿಜಬ್ ಕಡ್ಡಾಯ. ಆದರೆ ಈ ಆದೇಶದ ವಿರುದ್ಧ ಇರಾನ್ ಮಹಿಳೆಯರು ನಿಂತಿದ್ದಾರೆ. ಹಿಜಾಬ್ ( No to Hijab )ಅನ್ನುವುದು ಇರಾನಿ ಸಂಸ್ಕೃತಿಯಲ್ಲ ಅದು ತಾಲಿಬಾನ್ ಸಂಸ್ಕೃತಿ ಅನ್ನುವುದು ಅವರ ವಾದ
ಕರ್ನಾಟಕದಲ್ಲಿ ಹಿಜಬ್ ಬೇಕು ಅನ್ನುವ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸುಪ್ರೀಂಕೋರ್ಟ್ ನಲ್ಲಿ ಇದೇ ಪ್ರಕರಣ ಮುಂದಿನ ವಾರದಿಂದ ವಿಚಾರಣೆಗೆ ಬರಲಿದೆ. ಈ ನಡುವೆ ಇರಾನ್ ನಲ್ಲಿ ಹಿಜಬ್ ( No to Hijab ) ವಿರೋಧಿಸಿ ಹೋರಾಟ ತೀವ್ರಗೊಂಡಿದೆ.
ಹಿಜಬ್ ಕಡ್ಡಾಯಗೊಳಿಸಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇರಾನ್ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಟ್ವೀಟರ್ ನಲ್ಲಿ NO2Hijab ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ಸಂಚಲನ ಮೂಡಿಸಿದೆ.
ಇದನ್ನೂ ಓದಿ : narendra modi :ಮೋದಿ ಕಚೇರಿ ತಲುಪಿದ ಗುಂಡಿ ಬಿದ್ದ ಟೋಲ್ ಗೇಟ್ ರಸ್ತೆಯ ಸುದ್ದಿ
ಇರಾನ್ ನಲ್ಲಿ ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್ ಪ್ರವೇಶ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಹಿಜಬ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಸಾರ್ವಜನಿಕ ಪ್ರದೇಶದಲ್ಲಿ ಹಿಜಬ್ ತೆಗೆದು ವಿಡಿಯೋ ಮಾಡಿದರೆ ದೊಡ್ಡ ಶಿಕ್ಷೆಯನ್ನೂ ನೀಡಲಾಗುತ್ತದೆ. ಹೀಗಾಗಿ ಹಿಜಬ್ ಕಡ್ಡಾಯಗೊಳಿಸಿರುವ ನಿಯಮದ ವಿರುದ್ಧ ಹೋರಾಟಗಳು ನಡೆಯುತ್ತಲೇ ಇದೆ.
ಮುಂದುವರಿದ ಭಾಗವಾಗಿ ಜುಲೈ 12 ರಂದು ಬೀದಿಗಿಳಿದ ಪ್ರತಿಭಟನಕಾರರು ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮಗೆ ಹಿಜಬ್ ಬೇಡ ಅಂದಿದ್ದಾರೆ.
ಮೋದಿ ಕಚೇರಿ ತಲುಪಿದ ಗುಂಡಿ ಬಿದ್ದ ಟೋಲ್ ಗೇಟ್ ರಸ್ತೆಯ ಸುದ್ದಿ
ಸಂಸದರಿಗೆ ಬ್ರಹ್ಮರಕೂಟ್ಲು ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಇದೀಗ ಈ ಸಂಬಂಧ ನರೇಂದ್ರ ಮೋದಿಯವರಿಗೆ ದೂರು ನೀಡಲಾಗಿದೆ.
ಮಂಗಳೂರು : ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡ ದಕ್ಷಿಣ ಕನ್ನಡದಲ್ಲಿ ದಡ್ಡತನದ ಅನೇಕ ಕೆಲಸಗಲು ನಡೆಯುತ್ತಿರುತ್ತದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಆಗುತ್ತಿರುವ ಎಡವಟ್ಟುಗಲೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಈ ಸಾಲಿಗೆ ಮತ್ತೊಂದು ಸೇರ್ಪಡೆ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕರ್ಮಕಾಂಡ.
ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ವರ್ಷ ಹಲವು ಕಳೆಯಿತು. ಕಾಮಗಾರಿ ಮಾತ್ರ ಆಮೆ ವೇಗಕ್ಕಿಂತಲೂ ಕಡಿಮೆಯಾಗಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿದರೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದ್ಯಾಕೆ ಈ ಕಡೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಅನ್ನಿಸುತ್ತಿದೆ. ಅಥವಾ ಮಳೆಯ ನೆಪ ಹೇಳಿ ಅವರನ್ನೂ ದಾರಿ ತಪ್ಪಿಸಲಾಗಿದೆಯೇ.
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಿಸಿರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಸಮೀಪದ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆದರೂ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಲಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ದನಿ ಎತ್ತಲಿಲ್ಲ. ಜನ ಮಾತ್ರ ಟೋಲ್ ಕಟ್ಟಿಯೇ ಈ ಕಚಡಾ ರಸ್ತೆಯಲ್ಲಿ ಸಾಗಬೇಕಾಗಿದೆ.
ಇದೀಗ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರದ ಪುತ್ತೂರಿನ ರಾಜೇಶ್ ಕೃಷ್ಣ ಹಾಗೂ ರೋಶನ್ ಕುಮಾರ್ ಕುಂಬ್ಳೆಯವರು ಪ್ರಧಾನಮಂತ್ರಿ ಸಚಿವಾಲಯದ ಮೊರೆ ಹೋಗಿದ್ದಾರೆ. ರಸ್ತೆ ಫೋಟೋ ಹಾಗೂ ಪರಿಸ್ಥಿತಿಯನ್ನು ವಿವರವಾಗಿ ಬರೆದು ಪಿಎಎಂಒಗೆ ಕಳುಹಿಸಿಕೊಡಲಾಗಿದೆ.
ಜೊತೆಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಮತ್ತು ಕರ್ನಾಟಕ ಸಿಎಂ ಕಚೇರಿಗೂ ಮಾಹಿತಿ ನೀಡಲಾಗಿದೆ. ಇದೀಗ ದೂರು ಸ್ವೀಕೃತವಾಗಿದೆ. ಮೋದಿಯವರ ಹೆಸರಿನಲ್ಲಾದರೂ ಈ ರಸ್ತೆ ರಿಪೇರಿಯಾಗುತ್ತದೆಯೇ ಕಾದು ನೋಡಬೇಕು.
Discussion about this post