ಬೆಂಗಳೂರು : ನಾಡಿನೆಲ್ಲೆಡೆ ಇಂದು ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಕೊರೋನಾ ಆತಂಕದ ನಡುವೆಯೂ ಜಗತ್ತಿಗೆ ಬಂದಿರುವ ಸಂಕಷ್ಟ ನಿವಾರಿಸು ಎಂದು ಜನ ಪ್ರಾರ್ಥಿಸಿದ್ದಾರೆ. ಇನ್ನು ಹಲವು ಕಡೆ ಕೊರೋನಾ ಇದೆ ಅನ್ನುವುದನ್ನೇ ಮರೆತು ಜನ ಹಬ್ಬ ಆಚರಿಸಿದ್ದಾರೆ.
ಮತ್ತೊಂದು ಕಡೆ ಸೆಲೆಬ್ರೆಟಿಗಳು ಕೂಡಾ ವಿಘ್ನನಿವಾರಕನನ್ನು ಪೂಜಿಸಿದ್ದು, ಸಂಪ್ರದಾಯದಂತೆ ಮನೆಯಲ್ಲಿ ಗಣೇಶನಿಟ್ಟು ಭಕ್ತಿ ಭಾವದಿಂದ ಅರ್ಚಿಸಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಮನೆಯಲ್ಲೂ ಗಣೇಶನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಸೊಸೆ ರೇವತಿಯೊಂದಿಗೆ ಗಣೇಶನ ಹಬ್ಬ ಆಚರಿಸಿದ ಕುಮಾರಸ್ವಾಮಿ ದಂಪತಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ತುಂಬು ಗರ್ಭಿಣಿಯಾಗಿರುವ ರೇವತಿ ಪತಿ ನಿಖಿಲ್ ಜೊತೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಬ್ಬದ ಸಂಭ್ರಮವನ್ನು ನಿಖಿಲ್ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
Discussion about this post