Thursday, March 4, 2021

ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ ತಡೆಯೋ ಅಧಿಕಾರ ತಮಗಿಲ್ಲ : NIA ಕೋರ್ಟ್

Must read

- Advertisement -
- Advertisement -

ಮಧ್ಯಪದ್ರದೇಶದ ಭೋಪಾಲ್‌ ನಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಮಾಲೆಗಾಂವ್‌ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಸ್ಪರ್ಧೆಗೆ ತಡೆ ನೀಡಲು ನಮಗೆ ಅಧಿಕಾರ ಇಲ್ಲ ಎಂದು ಎನ್‌.ಐ.ಎ. ನ್ಯಾಯಾಲಯ ಹೇಳಿದೆ.

2008ರ ಮಾಲೆಗಾಂವ್‌ ಬಾಂಬ್‌ ಸ್ಪೋಟದಲ್ಲಿ ತನ್ನ ಮಗನನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು
ಸಾಧ್ವಿ ಪ್ರಜ್ಞಾ ಸಿಂಗ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತೆ ತಡೆ ನೀಡಬೇಕು ಎಂದು ಮುಂಬೈ ಎನ್‌.ಐ.ಎ. ವಿಶೇಷ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದರು.

ದೂರಿನ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯದ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಯಾರನ್ನೂ ತಡೆಯುವ ಅಧಿಕಾರ ತನಗಿಲ್ಲ. ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಚುನಾವಣಾ ಅಧಿಕಾರಿಗಳ ಕೆಲಸ. ಹೀಗಾಗಿ ಈ ವಿಚಾರವನ್ನು ಚುನಾವಣಾ ಆಯೋಗ ನೋಡಿಕೊಳ್ಳಲಿ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಅವರ ಉಮೇದುವಾರಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.

https://www.youtube.com/watch?v=e50f3wWj2CU
- Advertisement -
- Advertisement -
- Advertisement -

Latest article