ನವದೆಹಲಿ : ಮೋದಿ ವಿರೋಧಿ ವೆಬ್ ಸೈಟ್ ಎಂದು ಬಿಂಬಿತವಾಗಿರುವ ನ್ಯೂಸ್ ಕ್ಲಿಕ್ ವೆಬ್ ಸೈಟ್ ನಲ್ಲಿ ಚೀನಾ ಹೂಡಿಕೆ ಇದೆ ಅನ್ನುವ ಆರೋಪ ಕೇಳಿ ಬಂದಿದೆ.ಇದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಬಹಿರಂಗಗೊಂಡಿದೆ ಎನ್ನಲಾಗಿದ್ದು 38 ಕೋಟಿಯಷ್ಟು ಹಣ ಚೀನಾ ಕಮ್ಯೂನಿಸ್ಟ್ ಪಕ್ಷದಿಂದ ಹರಿದು ಬಂದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜಾರಿ ನಿರ್ದೇಶನಾಲಯ ಎನನ್ನೂ ಹೇಳಿಲ್ಲ.
ಈ ನಡುವೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಸಂಸ್ಥೆ ಎಂದು ಬಿಂಬಿಸಿಕೊಳ್ಳುತ್ತಿರುವ ನ್ಯೂಸ್ ಕ್ಲಿಕ್ ವೆಬ್ ಸೈಟ್ ಭಾರತದ ಮಾನಹಾನಿ ಮಾಡುವ ಕಾರ್ಯಸೂಚಿಯನ್ನು ಹೊಂದಿದೆ ಅಂದಿದ್ದಾರೆ.
ವಿದೇಶಗಳಿಂದ ಕೋಟ್ಯಂತರ ಹಣವನ್ನು ಅನುಮಾನಸ್ಪದ ರೀತಿಯಲ್ಲಿ ಪಡೆದಿರುವ ಸಂಸ್ಥೆ ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ಅದು ಅಂತರರಾಷ್ಟ್ರೀಯ ಟೂಲ್ ಕಿಟ್ ನ ಭಾಗವಾಗಿದ್ದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರಕ್ಕಾಗಿ ವಿದೇಶಗಳಿಂದ ದೇಣಿಗೆ ಹರಿದು ಬಂದಿದೆ.
ನ್ಯೂಸ್ ಕ್ಲಿಕ್ ಗೆ ವಿದೇಶಿ ನೇರ ಹೂಡಿಕೆ ಮೂಲಕ 9.59 ಕೋಟಿ ಮತ್ತು 28.46 ಕೋಟಿ ಇತರ ಸಂಕಾಸ್ಪದ ಉದ್ದೇಶಗಳಿಗಾಗಿ ಹರಿದು ಬಂದಿದೆ. ಇದು ಜಾರಿ ನಿರ್ದೇಶನಾಲಯಜ ತನಿಖೆಯಲ್ಲಿ ಬಯಲಾಗಿದೆ ಎಂದು ಸಂಬಿತ್ ಪಾತ್ರಾ, ಹೇಳಿದ್ದಾರೆ.
ಈ ಬಗ್ಗೆ ಪತ್ರಿಕ್ರಿಯೆ ನೀಡಿರುವ ನ್ಯೂಸ್ ಕ್ಲಿಕ್ ಮುಖ್ಯ ಸಂಪಾದಕ ಪ್ರಬೀರ್ ಪುರ್ ಕಾಯಸ್ಥ, ಅಮೆರಿಕಾದ ಪ್ರತಿಷ್ಠಾನಗಳಿಂದ ಅಧಿಕೃತ ಮಾರ್ಗದ ಮೂಲಕವೇ ವೆಬ್ ಸೈಟ್ ನ ಬ್ಯಾಂಕ್ ಖಾತೆಗಳಿಗೆ ಹಣ ಬಂದಿದೆ. ಭಾರತದ ವಿದೇಶಿ ಬಂಡವಾಳ ಹೂಡಿಕೆಯ ನಿಯಮಗಳನ್ನು ನಾವು ಪಾಲಿಸಿದ್ದೇವೆ. ಇಡಿ ನಡೆಸುತ್ತಿರುವ ತನಿಖೆಯ ಕೆಲವೇ ಕೆಲವು ಭಾಗಗಳನ್ನು ಸೋರಿಕೆ ಮಾಡಿ ವೆಬ್ ಸೈಟ್ ಅನ್ನು ಆರೋಪಿ ಎಂದು ಬಿಂಬಿಸಲಾಗುತ್ತಿದೆ ಅಂದಿದ್ದಾರೆ.
Discussion about this post