ಚೈನಾ ನಿರ್ಮಿತ ಕೊರೋನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಲಸಿಕಾ ಆಂದೋಲನ ಜೋರಾಗಿದೆ. ಹಾಗಿದ್ದರೂ ಪದೇ ಪದೇ ಹುಟ್ಟುತ್ತಿರುವ ರೂಪಾಂತರಿಗಳು ಲಸಿಕೆ ವಿರುದ್ದವೇ ಸಮರ ಸಾರುತ್ತಿದೆ. ಈ ನಡುವೆ ಭಾರತದ ಕೆಲ ಲಸಿಕೆಗಳು ರೂಪಾಂತರಿಗಳನ್ನು ಮಣಿಸುವ ವಿಶ್ವಾಸ ಮೂಡಿಸಿದೆ.
ಇನ್ನು ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಎರಡನೇ ಡೋಸ್ ಲಸಿಕಾ ವಿತರಣೆ ಕಾರ್ಯ ಪ್ರಾರಂಭವಾಗಿದೆ. ಅಮೆರಿಕಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಎರಡು ಡೋಸ್ ಲಸಿಕೆಗಳು ಸಂಪೂರ್ಣಗೊಂಡಿದೆ. ಹಾಗಂತ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ ಅಂತಲ್ಲ. ಅನೇಕರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಭಾರತದಲ್ಲೇ ಕೆಲವರು ನಿರ್ಲಕ್ಷ್ಯದಿಂದ ಮೊದಲ ಡೋಸ್ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಸ್ರೇಲ್ ನಾಲ್ಕನೇ ಡೋಸ್ ಬಗ್ಗೆ ಮಾತನಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಇಸ್ರೇಲ್ ಆರೋಗ್ಯ ತಜ್ಞ ಸಲ್ಮಾನ್ ಜಾರ್ಕಾ, ವುಹಾನ್ ವೈರಸ್ ಸೋಲಿಸುವ ನಿಟ್ಟಿನಲ್ಲಿ ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಅಗತ್ಯ ಅಂದಿದ್ದಾರೆ. ಡೆಲ್ಟಾ ರೂಪಾಂತರಿ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ನಾಲ್ಕನೇ ಡೋಸ್ ಅಗತ್ಯವಾಗಬಹುದು ಎಂದು ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ ಮಾಹಿತಿಗಳ ಪ್ರಕಾರ ಇಸ್ರೇಲ್ ತನ್ನ ದೇಶದ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲು ಶುರವಿಟ್ಟುಕೊಂಡಿದ್ದೆ.
Discussion about this post