ಆಲ್ಟ್ ನ್ಯೂಸ್ ಜುಬೇರ್ ಪರ ಈಗಾಗಲೇ ಎಡಪಂಥೀಯರು ಬೀದಿಗಿಳಿದಿದ್ದಾರೆ ಅನ್ನುವುದನ್ನು ನೆನಪಿಡಿ
ನವದೆಹಲಿ : ಆಲ್ಟ್ ನ್ಯೂಸ್ ನ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಖಾತೆಗೆ ಪಾಕಿಸ್ತಾನ, ಗಲ್ಫ್ , ಸಿರಿಯಾ ರಾಷ್ಟ್ರಗಳಿಂದ ಲಕ್ಷಾಂತರ ರೂಪಾಯಿ ಹಣ ಹರಿದು ಬಂದಿರುವುದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಲ್ಟ್ ನ್ಯೂಸ್ ನ ಮಾತೃ ಸಂಸ್ಥೆ ಪ್ರಾವ್ಹಾ ಮೀಡಿಯಾಗೆ ಪಾಕಿಸ್ತಾನ, ಸಿರಿಯಾ, ಸೇರಿದಂತೆ ವಿದೇಶಗಳಿಂದ 2 ಲಕ್ಷ ರೂಪಾಯಿ ಹಣ ದೇಣಿಗೆ ರೂಪದಲ್ಲಿ ಬಂದಿದೆ.
ಆದರೆ ಈ ದೇಣಿಗೆಗೆ ಸಂಬಂಧಿಸಿದಂತೆ ಎಲ್ಲಾ ದತ್ತಾಂಶಗಳನ್ನು ಜುಬೇರ್ ಅಳಿಸಿ ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಜುಬೇರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಿದೆ.
ಹಿಂದೂಗಳ ಭಾವನೆ ನೋಯಿಸುವ ಟ್ವೀಟ್ ಮಾಡಿದ ಆರೋಪದಲ್ಲಿ ಜುಬೇರ್ ಅವರನ್ನು ಬಂಧಿಸಲಾಗಿತ್ತು. ಇದೀಗ ಟ್ವೀಟ್ ಪ್ರಕರಣ ದೇಣಿಗೆಯತ್ತ ತಿರುಗಿದ್ದು, ಮುಂದಿನ ದಿನಗಳಲ್ಲಿ ಇನ್ನೇನು ಹೊರ ಬರಲಿದೆಯೋ ಗೊತ್ತಿಲ್ಲ.
Twitter handles supporting Alt News’ Zubair post-arrest mostly from middle-east countries, Pak : Delhi Police
Discussion about this post