ನ್ಯೂಯಾರ್ಕ್ : ಸೂರ್ಯ ಲೋಕವನ್ನು ತಲುಪುವುದು ಬಿಡಿ, ಅದರ ಹತ್ತಿರ ಹೋಗಲು ಸಾಧ್ಯವಿಲ್ಲ ಅನ್ನುವ ಮಾತಿತ್ತು. ಆದರೆ ಇದೀಗ ಅಮೆರಿಕಾದ ನಾಸಾ ಅದನ್ನು ಸುಳ್ಳು ಮಾಡಿದ್ದು, ಸೌರಮಂಡಲದ ಶಕ್ತಿಯ ಮೂಲವನ್ನು ಸ್ಪರ್ಶಿಸಿದೆ. ನಾಸಾ ಕಳುಹಿಸಿದ್ದ ಸೂರ್ಯ ಸಾಹಸಿ ‘ಪಾರ್ಕರ್ ಸೋಲಾರ್ ಪ್ರೋಬ್ ‘ ನೌಕೆ ಸೂರ್ಯನ ಹೊರಮೈ ಕೊರೋನಾವನ್ನು ಮೊಟ್ಟ ಮೊದಲ ಬಾರಿಗೆ ಸ್ಪರ್ಶಿಸಿದೆ. ಅಚ್ಚರಿ ಅಂದ್ರೆ 1.1 ಕೋಟಿ ಡಿಗ್ರಿ ಸೆಲ್ಸಿಸ್ ಉಷ್ಣಾಂಶವಿರುನ ಪ್ರದೇಶವನ್ನು ಸ್ಪರ್ಶಿಸಿದರೂ ನೌಕೆ ಸುಟ್ಟು ಬೂದಿಯಾಗಿಲ್ಲ.
ಈ ಮೂಲಕ ನಿಗೂಢತೆಯಿಂದ ಕೂಡಿರುವ ಸೂರ್ಯಲೋಕದ ಕುರಿತಂತೆ ಅನೇಕ ಮಾಹಿತಿಗಳನ್ನು ಪಾರ್ಕರ್ ಭೂಮಿಗೆ ಕಳುಹಿಸಿದೆ. ಸೌರ ವಿಜ್ಞಾನದಲ್ಲಿ ಇದೊಂದು ಕ್ರಾಂತಿಯಾಗಿದ್ದು, ಮುಂದಿನ ದಿನಗಳಲ್ಲಿ ಸೂರ್ಯದೇವನ ಬಗ್ಗೆ ಮಾಹಿತಿಗಳು ಸಿಗಲಿದೆ.
ಅಂದ ಹಾಗೇ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಪಾರ್ಕರ್ ಸೋಲಾರ್ ಪ್ರೋಬ್ ಅನ್ನು 2018ರ ಆಗಸ್ಟ್ ನಲ್ಲಿ ಅಮೆರಿಕಾ ಹಾಹ್ಯಾಕಾಶ ಸಂಸ್ಥೆ ನಾಸಾ ಕಳುಹಿಸಿಕೊಟ್ಟಿತ್ತು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ 7 ಸಲ ಸೂರ್ಯನ ಸಮೀಪ ಸಾಗಿದ್ದ ಪಾರ್ಕ್ 2 ರಿಂದ 3 ಸಲ ಕೊರೋನಾವನ್ನು ಸ್ಪರ್ಶಿಸಿತ್ತು. ಈ ವೇಳೆ ನೌಕೆ ತಾಸಿಗೆ 5 ಲಕ್ಷ ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರಣ ಸುಟ್ಟು ಬೂದಿಯಾಗಿಲ್ಲ.
ಹಾಗಂತ ಸಂಶೋಧನೆ ಮುಗಿಯಿತೇ ಖಂಡಿತಾ ಇಲ್ಲ. ಪ್ರಸ್ತುತ ನೌಕೆ ಸೂರ್ಯನ ಕೇಂದ್ರ ಬಿಂದುವಿನಿಂದ 1.3 ಕೋಟಿ ಕಿಮೀ ದೂರದಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಂದ್ರ ಬಿಂದುವಿನಿಂದ 79 ಲಕ್ಷ ಕಿಮೀ ದೂರಕ್ಕೆ ಪಾರ್ಕರ್ ಚಲಿಸಲಿದೆ. ಆಗ್ಲೂ ಯಾವುದೇ ಅಡ್ಡಿಯಾಗದಿದ್ರೆ 2025ಕ್ಕೆ ಮತ್ತಷ್ಟು ಒಳಗೆ ತೆರಳುವ ಪ್ರಯತ್ನ ನಡೆಯಲಿದೆ.
Discussion about this post